ಧಾರ್ಮಿಕ

ದ.ಕ.ಪದ್ಮಶಾಲಿ ಸಮಾಜ ಸೇವಾಕೂಟ (ರಿ) ಬೆಂಗಳೂರು: ಮಹಾಮ್ಮಾಯಿ ಭಜನಾ ಮಂಡಳಿಯಿಂದ ಕುಂಭಾಶಿಯಲ್ಲಿ ಭಜನಾ ಕಾರ್ಯಕ್ರಮ 

Views: 112

ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಕನ್ನಡ ಪದ್ಮಶಾಲಿ ಸಮಾಜ ಸೇವಾ ಕೂಟ (ರಿ,) ಬೆಂಗಳೂರು ಇದರ ಶ್ರೀ ಮಹಾಮ್ಮಾಯಿ ಭಜನಾ ಮಂಡಳಿ ಮೂಡಲಪಾಳ್ಯ ಬೆಂಗಳೂರು ಇವರಿಂದ ಕುಂದಾಪುರ ತಾಲೂಕಿನ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಭಜನಾ ಕಾರ್ಯಕ್ರಮ ನಡೆಯಿತು.

ಭಜನಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀಮತಿ ಕುಸುಮಾ ಮಾಧವ ಶೆಟ್ಟಿಗಾರ್, ಶ್ರೀಮತಿ ಪ್ರೇಮನಾರಾಯಣ ಶೆಟ್ಟಿಗಾರ್, ಶ್ರೀಮತಿ ವಿದ್ಯಾಲತಾ ಪ್ರಭಾಕರ್ ಶೆಟ್ಟಿಗಾರ್, ಶ್ರೀಮತಿ ಲಕ್ಷ್ಮೀ ನಾರಾಯಣ ಶೆಟ್ಟಿಗಾರ್, ಶ್ರೀಮತಿ ಸ್ವಯಂಪದ್ಮ ಪ್ರಭಾಕರ್ ಶೆಟ್ಟಿಗಾರ್, ಶ್ರೀಮತಿ ವತ್ಸಲಾ ದಾಮೋದರ , ಶ್ರೀಮತಿ ವಾರಿಜ ಅನಂತ ಶೆಟ್ಟಿಗಾರ್, ಶ್ರೀಮತಿ ಉಷಾ ಮಧುಕರ್ ಶೆಟ್ಟಿಗಾರ್, ಶ್ರೀಮತಿ ವಿಮಲಾ ನಿರ್ಮಲ್ ಶೆಟ್ಟಿಗಾರ್, ಶ್ರೀಮತಿ ಭಾನುಮತಿ ದೊಂಬಯ್ಯ ಶೆಟ್ಟಿಗಾರ್, ಶ್ರೀಮತಿ ಆಶಾ ರವೀಂದ್ರ ಶೆಟ್ಟಿಗಾರ್, ಶ್ರೀಮತಿ ಚಂದ್ರಿಕಾ ವಿವೇಕ ಶೆಟ್ಟಿಗಾರ್ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಭಜನಾ ಮಂಡಳಿಯ ಸದಸ್ಯರಿಗೆ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು.

Related Articles

Back to top button
error: Content is protected !!