ಯುವಜನ

ಟೆಕ್ಕಿ ಶರ್ಮಿಳಾ ಸಾವಿಗೆ ಸ್ಪೋಟಕ ಟ್ವಿಸ್ಟ್..! ಒನ್ ಸೈಡ್ ಲವ್ ಹೊಂದಿದ್ದ ವಿದ್ಯಾರ್ಥಿ ಅರೆಸ್ಟ್!

Views: 108

ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ನಗರದ ರಾಮಮೂರ್ತಿ ನಗರದಲ್ಲಿ ನಡೆದ ಟೆಕ್ಕಿ ಶರ್ಮಿಳಾ ಕೊಲೆ ಪ್ರಕರಣದಲ್ಲಿ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ.

ಆದರೆ ತನಿಖೆ ವೇಳೆ ಈತ ನೀಡಿರುವ ಹಲವು ಹೇಳಿಕೆಗಳು ಪೊಲೀಸರನ್ನೇ ಬೆಚ್ಚಿಬೀಳಿಸುವಂತಿವೆ. ಆರೋಪಿಯು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.97 ಅಂಕ ಗಳಿಸಿದ್ದ ಪ್ರತಿಭಾವಂತ ಎಂಬ ಅಂಶವೂ ಇದೀಗ ಬೆಳಕಿಗೆ ಬಂದಿದೆ.

ಆರೋಪಿ ಕಳೆದ ಎರಡು ತಿಂಗಳಿನಿಂದ ಯುವತಿಯ ಚಲನವಲನವನ್ನು ನಿತ್ಯ ಗಮನಿಸುತ್ತಿದ್ದ. ಓದುವ ನೆಪದಲ್ಲಿ ಹಾಗೂ ಬಟ್ಟೆ ತೊಳೆಯುವ ನೆಪದಲ್ಲಿ ಟೆರೇಸ್‌ಗೆ ಹೋಗುತ್ತಿದ್ದ ಆತ, ಯುವತಿಯ ಮನೆ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದ. ಆರೋಪಿ ಮತ್ತು ಯುವತಿ ನಡುವೆ ಈ ಹಿಂದೆ ಯಾವುದೇ ಪರಿಚಯವೂ ಇರಲಿಲ್ಲ. ಇದೇ ಮೊದಲ ಬಾರಿಗೆ ಆತ ಶರ್ಮಿಳಾ ಮನೆಗೆ ಪ್ರವೇಶಿಸಿದ್ದ. ಮನೆಯ ಬಾಲ್ಕನಿಯ ಸ್ಲೈಡಿಂಗ್ ಕಿಟಕಿ ಮೂಲಕ ಆತ ಒಳನುಗ್ಗಿರುವುದು ಗೊತ್ತಾಗಿದೆ.

ಆರೋಪಿ ಕರ್ನಲ್ ಕುರೈ ತುಂಬಾ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.97 ಪರ್ಸೆಂಟ್ ಅಂಕ ಪಡೆದಿದ್ದು, ಪಿಯುಸಿ ಸೈನ್ಸ್ ವಿಭಾಗಕ್ಕೆ ಸೇರಿದ್ದ. ಆರೋಪಿ ಕರ್ನಲ್ ಹಾಗೂ ಆತನ ತಾಯಿ ಇಬ್ಬರೇ ಮನೆಯಲ್ಲಿ ವಾಸವಾಗಿದ್ದರು. ಈತನ ತಾಯಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.

ಕಾಲೇಜು ದಿನಗಳಲ್ಲಿ ಸ್ಲೈಡಿಂಗ್ ಕಿಟಕಿಯಲ್ಲಿ ಪುಸ್ತಕ ಸಿಲುಕಿದ್ದ ಸಂದರ್ಭದಿಂದ ಆ ರೀತಿಯ ಕಿಟಕಿಗಳನ್ನು ಹೇಗೆ ತೆರೆಯಬೇಕು ಎಂಬುದನ್ನು ಆರೋಪಿ ಕಲಿತಿದ್ದ. ಅದೇ ತಂತ್ರ ಬಳಸಿ ಜನವರಿ 3ರಂದು ಯುವತಿಯ ಸ್ನೇಹಿತೆ ಮನೆಯಲ್ಲಿ ಇಲ್ಲದ ಸಮಯವನ್ನು ಖಚಿತಪಡಿಸಿಕೊಂಡು, ಸ್ಲೈಡಿಂಗ್ ವಿಂಡೋ ತೆರೆದು ಬೆಡ್‌ರೂಮ್‌ಗೆ ಪ್ರವೇಶಿಸಿದ್ದ.

ಕುರೈ ಮನೆಯೊಳಗೆ ಪ್ರವೇಶಿಸಿದ ವೇಳೆ ಯುವತಿ ಅಡುಗೆ ಮನೆಯಲ್ಲಿ ಹಾಲು ಕಾಯಿಸಲು ಸ್ಟವ್ ಆನ್ ಮಾಡಿದ್ದಳು. ಈ ವೇಳೆ ಹಿಂದಿನಿಂದ ತಳ್ಳಿದಾಗ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಇದೇ ವೇಳೆ ಹಾಲು ಉಕ್ಕಿ ಸ್ಟವ್ ಬೆಂಕಿ ಆರಿಹೋಗಿದೆ. ನಂತರ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಆಗ ಉಸಿರುಗಟ್ಟಿ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಪ್ರಾರಂಭದಲ್ಲಿ ಅಡುಗೆ ಕೋಣೆಯಲ್ಲಿ ಯುವತಿಯ ಮೃತದೇಹ ಪತ್ತೆಯಾದಾಗ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿತ್ತು. ಬೆಂಕಿಯ ತೀವ್ರತೆಯಿಂದ ಮೊಬೈಲ್ ಕೂಡ ಕರಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿತ್ತು. ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸಮೀಪದ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಕೆಲವರನ್ನು ವಿಚಾರಣೆ ನಡೆಸಿದ ಪೊಲೀಸರು, ಬಳಿಕ ಕರ್ನಲ್ ಕುರೈನನ್ನೂ ಪ್ರಶ್ನಿಸಲು ಮುಂದಾದರು. ಈ ನಡುವೆ ಯುವತಿಯ ಮೊಬೈಲ್ ಫೋನ್ ಆರೋಪಿಯ ಬಳಿಯೇ ಪತ್ತೆಯಾಗಿದ್ದು, ಇದನ್ನಾಧರಿಸಿ ಆತನನ್ನು ಬಂಧಿಸಲಾಗಿದೆ.

ಟ್ವಿಸ್ಟ್ ಮತ್ತು ಕೊಲೆಯ ವಿವರ: ತನಿಖೆಯಲ್ಲಿ ಪೊಲೀಸರು ಶರ್ಮಿಳಾ ಪಕ್ಕದ ಮನೆಯ 18 ವರ್ಷದ ಕರ್ನಲ್ ಕುರೈ ಮೇಲೆ ಶಂಕೆ ಹರಿಸಿದರು. ಕುರೈ ಕಾಲೇಜು ವಿದ್ಯಾರ್ಥಿಯಾಗಿದ್ದು, ಶರ್ಮಿಳಾ ಮೇಲೆ ಒನ್ ಸೈಡ್ ಲವ್ ಹೊಂದಿದ್ದನು. ಆದರೆ ಈ ಭಾವನೆಯನ್ನು ಆಕೆಗೆ ಹೇಳಿರಲಿಲ್ಲ. ಜನವರಿ 3ರ ರಾತ್ರಿ ಬಾಲ್ಕನಿ ಮೂಲಕ ಮನೆಯೊಳಗೆ ನುಗ್ಗಿದ ಕುರೈ, ಶರ್ಮಿಳಾಳನ್ನು ಹಿಂಬದಿಯಿಂದ ಅಪ್ಪಿಕೊಂಡನು. ಆಕೆ ಬಿಡಿಸಿಕೊಳ್ಳಲು ಯತ್ನಿಸಿದಾಗ ಕುತ್ತಿಗೆಗೆ ಬಲವಾಗಿ ಹೊಡೆದು ಪ್ರಜ್ಞೆ ತಪ್ಪಿಸಿದನು. ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದನು. ಸಾಕ್ಷ್ಯ ನಾಶ ಮಾಡಲು ಮನೆಗೆ ಬೆಂಕಿ ಹಚ್ಚಿ ಪರಾರಿಯಾದನು ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿ ಈಗ ಜೈಲಿನಲ್ಲಿದ್ದಾನೆ.

Related Articles

Back to top button
error: Content is protected !!