ಯುವಜನ

ಕುಂದಾಪುರ: ಪೋಷಕರು ಬುದ್ದಿಮಾತು ಹೇಳಿದ್ದಕ್ಕೆ ಕೆರಾಡಿಯ ಡಿಪ್ಲೋಮ ವಿದ್ಯಾರ್ಥಿ ಆತ್ಮಹತ್ಯೆ

Views: 126

ಕನ್ನಡ ಕರಾವಳಿ ಸುದ್ದಿ: ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ  ನೊಂದು ಮನೆಯಲ್ಲಿಯೇ ಕೀಟನಾಶಕ ಸೇವಿಸಿದ್ದ ಕೆರಾಡಿಯ ಹಯ್ಯಂಗಾರ್ ಹೊಸಮನೆ ನಿವಾಸಿ ಮನೀಷ್ (16) ಮಾ. 4 ರಂದು ಮಣಿಪಾಲದ ಕೆ. ಎಂ.ಸಿ. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೆರಾಡಿಯ ಮಂಜುನಾಥ ಅವರ ಪುತ್ರರಾಗಿದ್ದ ಮನೀಷ್ ಉಡುಪಿ ಕೊಳಲಗಿರಿಯಲ್ಲಿರುವ ಜಿ.ಟಿ.ಟಿ.ಸಿ. ಕಾಲೇಜಿನಲ್ಲಿ ಡಿಪ್ಲೋಮ ವಿದ್ಯಾಭ್ಯಾಸ ಮಾಡುತ್ತಿದ್ದರು. ಇತ್ತೀಚಿಗೆ ಸರಿಯಾಗಿ ಕಾಲೇಜಿಗೆ ಹೋಗದ ಕಾರಣ ಮಂಜುನಾಥ ಅವರು ಬುದ್ದಿಮಾತು ಹೇಳಿದ್ದರು. ಬಳಿಕ ವಿಷ ಸೇವಿಸಿ ಅಸ್ವಸ್ಥನಾಗಿದ್ದು, ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಕೆಲವು ದಿನ ಚಿಕಿತ್ಸೆ ಕೊಡಿಸಿ ಬಳಿಕ ಫೆ. 19ರಂದು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button
error: Content is protected !!