ಯುವಜನ
ಉಡುಪಿ: ಇಲಿ ಪಾಷಾಣ ಸೇವಿಸಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ
Views: 124
ಕನ್ನಡ ಕರಾವಳಿ ಸುದ್ದಿ: ಇಲಿ ಪಾಷಾಣ ಸೇವಿಸಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಡಬ ರೆಂಜಿಲಾಡಿಯ ಲಾರೆನ್ಸ್ ಎಂಬವರ ಮಗಳು ಸ್ವೀಟಿ(18) ಎಂದು ಗುರುತಿಸಲಾಗಿದೆ.
ಇವರು ಉಡುಪಿಯ ನರ್ಸಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು ಆಸ್ಪತ್ರೆಯ ವಸತಿ ನಿಲಯದಲ್ಲಿ ತರಗತಿ ಮುಗಿದ ನಂತರ ಉಳಿದುಕೊಳ್ಳುತ್ತಿದ್ದರು.
ವಸತಿ ನಿಲಯದಲ್ಲಿರುವಾಗ ಇಲಿ ಪಾಷಣಾ ಸೇವನೆ ಮಾಡಿದ್ದರು. ಬಳಿಕ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾ. 3ರಂದು ನಿಧನ ಹೊಂದಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






