ಯುವಜನ

ದೇವಸ್ಥಾನದ ಸ್ನಾನಗೃಹದಲ್ಲಿ ಇಬ್ಬರು ಹುಡುಗಿಯರ ಮೃತ ದೇಹ ಪತ್ತೆ..! ಸಾವಿಗೆ ಕಾರಣವೇನು?

Views: 110

ಕನ್ನಡ ಕರಾವಳಿ ಸುದ್ದಿ: ದೇವಾಲಯದ ಆವರಣದಲ್ಲಿ ಇಬ್ಬರು ಯುವತಿಯರ ಮೃತದೇಹಗಳು ಪತ್ತೆಯಾಗಿರುವ ಘಟನೆ ಗುಜರಾತ್ ಗಾಂಧೀನಗರದ ಸೂರತ್‌ನ ಸ್ವಾಮಿನಾರಾಯಣ ದೇವಾಲಯದಲ್ಲಿ ನಡೆದಿದೆ.

ದೇವಾಲಯದ ಆವರಣದಲ್ಲಿರುವ ಸ್ನಾನಗೃಹದಲ್ಲಿ ಇಬ್ಬರು ಯುವತಿಯರು ಶವವಾಗಿ ಪತ್ತೆಯಾಗಿದ್ದಾರೆ. ವಿಷಕಾರಿ ಔಷಧಗಳ ಚುಚ್ಚುಮದ್ದು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಇಬ್ಬರು ಹುಡುಗಿಯರು ಮನೆಯಿಂದ ಕಾಲೇಜಿಗೆ ಹೊರಟಿದ್ದು, ಆದರೆ ಮಧ್ಯಾಹ್ನದ ವೇಳೆಗೆ ಹಿಂತಿರುಗಲಿಲ್ಲ. ಬಳಿಕ ಮಾಹಿತಿ ತಿಳಿದ ಪೊಲೀಸರು ಹುಡುಕಾಟ ಆರಂಭಿಸಿದ್ದು, ಫೋನ್‌ಗಳ ಲೊಕೇಷನ್‌ ಆಧರಿಸಿ ದೇವಾಲಯ ಸಂಕೀರ್ಣದಲ್ಲಿ ಕೊನೆಯದಾಗಿ ಇದ್ದ ಸ್ಥಳವನ್ನು ಪೊಲೀಸರು ಪತ್ತೆಹಚ್ಚಿದರು. ಶನಿವಾರವೂ ಮುಂದುವರಿದ ಹುಡುಕಾಟದಲ್ಲಿ ಅವರ ಸ್ಕೂಟರ್‌ಗಳು ನಿಂತಿರುವುದು ಕಂಡುಬಂದಿದೆ.

ದೇವಾಲಯದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಹುಡುಗಿಯರು ಸ್ನಾನಗೃಹದ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ, ಲಾಕ್ ಆಗಿದ್ದ ಸ್ನಾನಗೃಹದ ಬಾಗಿಲನ್ನು ಒಡೆದು ಒಳನುಗ್ಗಿದಾಗ ಹುಡುಗಿಯರು ಸತ್ತಿರುವುದು ಕಂಡುಬಂದಿದೆ. ಅವರ ದೇಹದ ಬಳಿ ಬಿದ್ದಿದ್ದ ಒಂದು ಸಿರಿಂಜ್ ಮತ್ತು ಮೂರು ಬಾಟಲಿ ವಿಷಕಾರಿ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯುವತಿಯರ ಸಾವಿಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ

Related Articles

Back to top button
error: Content is protected !!