ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಪ್ರೌಢಶಾಲೆ 30ರ ಸಂಭ್ರಮ
Views: 187
ಕನ್ನಡ ಕರಾವಳಿ ಸುದ್ದಿ: ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಕಮಲಶಿಲೆಯ 30ರ ಸಂಭ್ರಮ ಹಳೆ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಧ್ವಜಾರೋಹಣ, ಸಂಜೆ ವಾರ್ಷಿಕೋತ್ಸವ, ಗುರುವಂದನೆ, ಹಳೆ ವಿದ್ಯಾರ್ಥಿಗಳ ಯಕ್ಷಗಾನ, ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಧ್ವಜಾರೋಹಣಗೈದ ಕಮಲಶಿಲೆ ಶ್ರೀಧರ ಅಡಿಗ ಅವರು ಮಾತನಾಡಿ, ಇದು ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದವಿರುವ ಶಾಲೆ, ಹಾಗಾಗಿ ಇಲ್ಲಿ ಕಲಿತ ವಿಧ್ಯಾರ್ಥಿಗಳೆಲ್ಲ ಒಂದಿಲ್ಲೊಂದು ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ, ದೇವಿಯ ಕೃಪೆಯಿಂದ ಇಲ್ಲಿ ಪದವಿ ಶಿಕ್ಷಣ, ವಸತಿ ನಿಲಯವು ಸ್ಥಾಪಿಸುವಂತಾಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಆಜ್ರಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೂಕಾಂಬು ಶೆಡ್ತಿ ಶಾಲೆಯ ಕಾರ್ಯವೈಖರಿಯ ಬಗ್ಗೆ ಶ್ಲಾಘಿಸಿದರು.
ಅತಿಥಿಯಾಗಿ ಆಗಮಿಸಿದ ಶಾಲೆಯ ಹಳೆ ವಿದ್ಯಾರ್ಥಿಗಳಾದ ವೇದಮೂರ್ತಿ ಕೃಷ್ಣ ಮೂರ್ತಿ ಅಡಿಗ, ಸ್ಪಾಟ್ ಪ್ರಿಂಟ್ ಬೆಂಗಳೂರು ಇಲ್ಲಿಯ ಸತೀಶ್ ಕೊಠಾರಿ, ಅವಿನಾಶ ಕಮಲಶಿಲೆ, ಸುಷ್ಮಿತ ಕೊಠಾರಿ ತಮ್ಮ ಅನುಭವವನ್ನು ಹಂಚಿಕೊಂಡರು.
ಶಾಲಾ ವಿದ್ಯಾರ್ಥಿಗಳ ಹಾಗೂ ಹಳೆ ವಿದ್ಯಾರ್ಥಿಗಳ ಸ್ಪೋರ್ಟ್ಸ್ ಹಾಗೂ ಇನ್ನಿತರ ಸ್ಪರ್ದಾ ವಿಜೇತರ ಬಹುಮಾನ ವಿತರಣೆ ನಡೆಸಲಾಯಿತು. ಸಂಜೆ ವಾರ್ಷಿಕೋತ್ಸವದ ಪ್ರಯುಕ್ತ ಕಮಲಶಿಲೆ ಹಾಗೂ ಆಜ್ರಿ ಮಾನಂಜೆ ಅಂಗನವಾಡಿ ಪುಟಾಣಿಗಳು ಮತ್ತು ಸ.ಹಿ.ಪ್ರಾ.ಶಾಲೆ ಆಜ್ರಿ ಮಾನಂಜೆ ಕಮಲಶಿಲೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ತಮಿಳುನಾಡಿನ ಆಡಿಟರ್ ದೇವಿಯ ಪರಮ ಭಕ್ತ ಶ್ರೀ ರಾಜಶೇಖರ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಗುರುವಂದನಾ ಕಾರ್ಯಕ್ರಮದ ಮೂಲಕ ಮುವತ್ತು ವರ್ಷಗಳಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ ದೇಗುಲದ ಆನುವಂಶಿಕ ಆಡಳಿತ ಧರ್ಮದರ್ಶಿಗಳಾದ ಶ್ರೀಯುತ ಸಚ್ಚಿದಾನಂದ ಚಾತ್ರ ಅವರು ಮಾತನಾಡಿ, ತನ್ನ ಕನಸಿನ ಕೂಸಾಗಿರುವ ಈ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಆನುವಂಶಿಕ ಧರ್ಮದರ್ಶಿಗಳಾದ ಶ್ರೀ ಚಂದ್ರಶೇಖರ ಶೆಟ್ಟಿ, ಶ್ರೀ ವಾಸುದೇವ ಯಡಿಯಾಳ ದುರ್ಗಾ ಕಾಫಿ ಕುಂದಾಪುರ , ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಮಾಜಿ ಅಧ್ಯಕ್ಷರು ಶ್ರೀ ಬಾಲಚಂದ್ರ ಭಟ್ ಹಾಗೂ ಈಗಿನ ಅಧ್ಯಕ್ಶರಾದ ಶ್ರೀ ಪ್ರದೀಪ್ ಯಡಿಯಾಳ, ಪ್ರಭಾಕರ ಶೆಟ್ಟಿ ಜಿಲ್ಲಾ ಅಧ್ಯಕ್ಷರು ಪ್ರೌಡ ಶಾಲಾ ಸಹಶಿಕ್ಷಕರ ಸಂಘ ಉಡುಪಿ, ಆಜ್ರಿ ಮಾನಂಜೆ ಕ್ಲಸ್ಟರ್ ಸಿಆರ್ ಪಿ ಶ್ರೀ ರಾಘವೇಂದ್ರ ಡಿ, ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಎಮ್ ಸುರೇಂದ್ರ ಶೆಟ್ಟಿ ಅವರು ಪ್ರಾಸ್ತಾವಿಕ ನುಡಿ ಜೊತೆಗೆ ವರದಿ ವಾಚನ ಮಾಡಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀಮತಿ ಸೂಕ್ಷ್ಮ ಎಸ್ ಅಡಿಗ ಸ್ವಸ್ಥಿ ವಾಚನದ ಮೂಲಕ ಶಾಲೆಯ ಆರಂಭಿಕ ದಿನಗಳ ಮೆಲುಕು ಹಾಕಿದರು. ಹಳೆ ವಿದ್ಯಾರ್ಥಿ ಸುಕುಮಾರ್ ಶೆಟ್ಟಿ ಸ್ವಾಗತಿಸಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಂದ್ರ ಹಳ್ಳಿಹೊಳೆ ವಂದಿಸಿದರು. ಶಾಲಾ ಶಿಕ್ಷಕಿಯರು ಹಾಗೂ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ‘ನೃತ್ಯ ಸಿಂಚನ’ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಹಳೆ ವಿದ್ಯಾರ್ಥಿಗಳ ಯಕ್ಷಗಾನ ‘ಚತುರ್ಜನ್ಮ ಮೋಕ್ಷ’ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.






