ಉಡುಪಿಯ ವಧು, ಕೆನಾಡದ ವರ ; ಹುಡುಗನಿಗೆ ರಜೆ ಸಿಗಲಿಲ್ಲ ಎಂಬ ಕಾರಣಕ್ಕೆ ಆನ್ಲೈನ್ ಮೂಲಕ ಅಪರೂಪದ ಎಂಗೇಜ್ಮೆಂಟ್!
Views: 168
ಕನ್ನಡ ಕರಾವಳಿ ಸುದ್ದಿ: ಉಡುಪಿಯಲ್ಲಿಅಪರೂಪದ ಮದುವೆ ನಿಶ್ಚಿತಾರ್ಥ ನಡೆದಿದೆ.ಇವತ್ತು ಎಲ್ಲವೂ ಆನ್ಲೈನ್ ಮಾಯ. ಇದೀಗ ಜೋಡಿಯೊಂದು ಆನ್ಲೈನ್ ಮೂಲಕವೇ ನಿಶ್ವಿತಾರ್ಥ ನೆರವೇರಿಸಿಕೊಂಡಿದೆ. ಕೆನಾಡದಲ್ಲಿದ್ದ ವರ, ಉಡುಪಿಯಲ್ಲಿದ್ದ ವಧು ಮಧ್ಯೆ ಆನ್ಲೈನ್ ಮೂಲಕ ಎಂಗೇಜ್ಮೆಂಟ್ ನಡೆದಿದೆ.
ಮಾಗಡಿಯ ಚಕ್ರಬಾವಿ ನಿವಾಸಿ ಸುಹಾಸ್, ಕೆನಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಉಡುಪಿಯ ಮೇಘಾ ಜೊತೆ ನಿಶ್ಚಿತಾರ್ಥ ನಿಗಧಿಯಾಗಿತ್ತು. ಬ್ರಾಹ್ಮಣರ ಸಂಪ್ರದಾಯದಂತೆ ನಿಶ್ಚಿತಾರ್ಥ ಕಾರ್ಯಕ್ರಮ ಜರುಗಿದೆ.
ಆದರೆ ರಜೆ ಸಿಗದ ಕಾರಣ ಇಲ್ಲಿಗೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆನ್ಲೈನ್ ಮೂಲಕ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ.
ಮುಂದಿನ ತಿಂಗಳು ಜನವರಿ 7 ಮತ್ತು 8 ರಂದು ಉಡುಪಿಯಲ್ಲಿ ಮದುವೆ ನಡೆಯಲಿದೆ. ರಜೆ ಸಿಗದ ಕಾರಣ ಆನ್ ಲೈನ್ ವಿಡಿಯೋಗೆ ಇಬ್ಬರೂ ಉಂಗುರವನ್ನು ಕ್ಯಾಮೆರಾಗಳಿಗೆ ತೋರಿಸಿ ಉಡುಪಿಯ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಉಡುಪಿಯಲ್ಲಿ ಬೆಳಿಗ್ಗೆ ಆದರೆ, ಕೆನಡಾದಲ್ಲಿ ಮಧ್ಯರಾತ್ರಿ ಯಾಗಿತ್ತು.
ವಿಡಿಯೋ ಸ್ಕ್ರೀನ್ಗೆ ಆರತಿ ಬೆಳಗಿ ಮಂತ್ರಾಕ್ಷತೆ ಹಾಕಿ ಹಿರಿಯರು ಶುಭ ಕೋರಿದ್ದಾರೆ. ನಿಶ್ಚಿತಾರ್ಥಕ್ಕೆ ಎರಡು ಕುಟುಂಬದವರು ಸಾಕ್ಷಿಯಾದರು.






