ಸಾಮಾಜಿಕ

ಅತ್ತೆ, ಮಾವನ ಕಿರುಕುಳಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆ: ಆಸ್ಪತ್ರೆಯಲ್ಲಿ ಶವ ಬಿಟ್ಟು ಪರಾರಿಯಾದ ಪತಿ ಕುಟುಂಬಸ್ಥರು

Views: 264

ಕನ್ನಡ ಕರಾವಳಿ ಸುದ್ದಿ: ಅತ್ತೆ,ಮಾವನ ಕಿರುಕುಳಕ್ಕೆ ಯುವತಿಯೊಬ್ಬಳು ಚಿಕಿತ್ಸೆಗೆ ಬಂದು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ. ಈ ಘಟನೆಯಲ್ಲಿ ಪತಿ, ಅತ್ತೆ, ಮಾವ ಮತ್ತು ಇತರ ಕುಟುಂಬಸ್ಥರು ಶವವನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ದುರಂತ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಮೃತಳು ಕೋಣಂದೂರಿನ ಯುವತಿ. ಮೂರು ವರ್ಷಗಳ ಹಿಂದೆ ಶಿವಮೊಗ್ಗದ ಶರತ್ ಎಂಬುವನನ್ನು ಮದುವೆಯಾಗಿದ್ದಳು. ಈ ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಮದುವೆಯ ನಂತರ ಅತ್ತೆ, ಮಾವ, ಸಹೋದರಿ ಸೇರಿದಂತೆ ಶರತ್ ಕುಟುಂಬದವರು ನಿರಂತರ ಕಿರುಕುಳ ನೀಡುತ್ತಿದ್ದರು. ಈ ಕಿರುಕುಳದಿಂದಾಗಿ ಮೃತಳು ಹಲವು ಬಾರಿ ತಾಯಿ ಮನೆಗೆ ಬಂದು ಸಂಕಷ್ಟವನ್ನು ಹಂಚಿಕೊಂಡಿದ್ದಳು. ಕುಟುಂಬಸ್ಥರು ಸಮಾಧಾನಗೊಳಿಸಿ ಮತ್ತೆ ಪತಿ ಮನೆಗೆ ಕಳುಹಿಸಿದ್ದರು.

ಹಿಂದಿನಂತೆಯೇ ಕಿರುಕುಳ ಮುಂದುವರಿದ ನಂತರ ಮೃತಳು ಕ್ರಿಮಿನಾಶಕ ಸೇವಿಸಿದ್ದಳು. ತಕ್ಷಣವೇ ಅವಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯಿಂದಲೂ ಉಳಿಯಲಿಲ್ಲ. ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಂತರ ಶರತ್ ಕುಟುಂಬದವರು ಭಯಭೀತರಾಗಿ ಶವವನ್ನು ಬಿಟ್ಟು ತಮ್ಮ ಮಗನನ್ನು ಕರೆದುಕೊಂಡು ಪ ಪರಾರಿಯಾದರು.ಈ ಘಟನೆಯಿಂದಾಗಿ ಆಸ್ಪತ್ರೆಯಲ್ಲಿ ಗೊಂದಲ ಉಂಟಾಗಿತ್ತು.

ಮೃತಳ ಕುಟುಂಬಸ್ಥರು ಈ ಘಟನೆಯ ಬಗ್ಗೆ ತಿಳಿದು ಆಸ್ಪತ್ರೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಶರತ್ ಕುಟುಂಬದವರ ಮೇಲೆ ಕಿರುಕುಳ ಮತ್ತು ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈಗ ಈ ಕೇಸ್‌ನಲ್ಲಿ ಕೊಲೆಯ ಶಂಖೆಯಡಿ ತನಿಖೆ ನಡೆಸಲಾಗುತ್ತಿದೆ. ಪತಿ ಮತ್ತು ಕುಟುಂಬಸ್ಥರನ್ನು ಹುಡುಕಲು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ

 

Related Articles

Back to top button
error: Content is protected !!