ಸಾಮಾಜಿಕ
ಗಂಡ ಹೆಂಡತಿಯ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ: ಗಂಡನ ಏಟಿಗೆ ಪ್ರಾಣ ಬಿಟ್ಟ ಪತ್ನಿ

Views: 115
ಕನ್ನಡ ಕರಾವಳಿ ಸುದ್ದಿ: ದೈಹಿಕ ಸಂಪರ್ಕಕ್ಕೆ ಒಪ್ಪದ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ದಾರುಣ ಘಟನೆ ಯಾದಗಿರಿಯ ಸುರಪುರದಲ್ಲಿ ನಡೆದಿದೆ.
40 ವರ್ಷ ವಯಸ್ಸಿನ ಸಂಗಪ್ಪ ಕೊಲೆಗೈದ ಆರೋಪಿ. ಆತನ ಪತ್ನಿ ಮರೆಮ್ಮ ಹತ್ಯೆಗೀಡಾದ ಮಹಿಳೆ. ಗಂಡ ಹೆಂಡತಿ ಮಧ್ಯೆ ಭಾನುವಾರ ರಾತ್ರಿ ದೈಹಿಕ ಸಂಪರ್ಕ ವಿಚಾರವಾಗಿ ಜಗಳವಾಗಿತ್ತು. ಪತ್ನಿ ದೈಹಿಕ ಸಂಪರ್ಕಕ್ಕೆ ಒಪ್ಪಿರಲಿಲ್ಲ. ಈ ವೇಳೆ, ಜಗಳ ವಿಕೋಪಕ್ಕೆ ತಿರುಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
ಗಂಡ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಒಂದು ವರ್ಷದಿಂದ ಮರೆಮ್ಮ ತವರು ಮನೆಯಲ್ಲಿದ್ದರು. ಭಾನುವಾರ ಸುರಪುರಕ್ಕೆ ಬಂದ ಸಂಗಪ್ಪ ಪತ್ನಿಯನ್ನು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. ಒಪ್ಪದೇ ಇರುವುದಕ್ಕೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
ಸದ್ಯ ಘಟನಾ ಸ್ಥಳಕ್ಕೆ ಸುರಪುರ ಠಾಣೆಯ ಪೊಲೀಸರು ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ. ಸಂಗಪ್ಪನನ್ನು ಬಂಧಿಸಲಾಗಿದೆ.