ಧಾರ್ಮಿಕ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಕೇಂದ್ರದಲ್ಲಿ ಡಿ ಜಿ – ಪೇ ಸೇವೆಗೆ ಚಾಲನೆ

Views: 89

ಕನ್ನಡ ಕರಾವಳಿ ಸುದ್ದಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ -2 ಯೋಜನಾ ಕಚೇರಿ ವ್ಯಾಪ್ತಿಯ ಎಲ್ಲಾ ಹಣ ಸಂಗ್ರಹಣಾ ಕೇಂದ್ರಗಳಲ್ಲಿ ಡಿಜಿ – ಪೇ ಸೇವೆಯನ್ನು ಆರಂಭಿಸಲಾಯಿತು. ಬೀಜಾಡಿಯಲ್ಲಿನ ಬಿ.ಸಿ. ಕೇಂದ್ರದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಜಿ. ಪೂಜಾರಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಧರ್ಮಸ್ಥಳದ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ. ಉತ್ತಮ ಸೇವೆಯನ್ನು ನೀಡುವುದರೊಂದಿಗೆ ಗ್ರಾಮೀಣ ಜನರಿಗೆ ಉಳಿತಾಯ ಮತ್ತು ಸ್ವಾವಲಂಬನೆಯ ಅರಿವು ಮೂಡಿಸುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ಯೋಜನಾಧಿಕಾರಿ ನಾರಾಯಣ ಪಾಲನ್ ಡಿಜಿ – ಪೇ ಸೇವೆಯ ಬಗ್ಗೆ ಮಾಹಿತಿ ನೀಡಿ, ಸದಸ್ಯರಿಗೆ ಅಥವಾ ಊರಿನ ನಾಗರಿಕರಿಗೆ ಎಟಿಎಂ ಅಥವಾ ಬ್ಯಾಂಕ್ ಮೂಲಕ ಹಣ ನಗದೀಕರಣ ಸುಲಭವಾಗಲು ಈ ಸೇವೆಯನ್ನು ಪರಿಚಯಿಸಲಾಗಿದೆ. ಕೆಲವೊಂದು ಹಳ್ಳಿ ಪ್ರದೇಶದ ಜನರು ಹಣ ಹಿಂಪಡೆಯಲು ಪೇಟೆ ಪ್ರದೇಶಗಳಿಗೆ ಬರಬೇಕಾಗುತ್ತದೆ. ಆದರೆ ಸಿ ಎಸ್ ಸಿ ಕೇಂದ್ರವಿರುವ ಪ್ರದೇಶಗಳಲ್ಲಿ ಅವರ ಎಟಿಎಂ ಕಾರ್ಡ್ ಮೂಲಕ ಅಲ್ಲಿಯೇ ನಗದೀಕರಣ ಮಾಡಬಹುದು. ಇದು ಉತ್ತಮ ಅವಕಾಶ ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಫಲಾನುಭವಿಗಳು ತಮ್ಮ ಖಾತೆಯಿಂದ ಎಟಿಎಂ ಕಾರ್ಡ್ ಮುಖಾಂತರ ನಗದು ಪಡೆಯುವ ವಿಧಾನದ ಪ್ರಾತ್ಯಕ್ಷಿಕೆಯ ಮೂಲಕ ಪ್ರಥಮ ಡಿಜಿ – ಪೇ ಸೇವೆಗೆ ಅವರು ಚಾಲನೆ ನೀಡಿದರು.

ಈ ಸಂದರ್ಭ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸುಬ್ರಹ್ಮಣ್ಯ ಶೆಟ್ಟಿ, ಒಕ್ಕೂಟ ಅಧ್ಯಕ್ಷರು, ವಲಯದ ಮೇಲ್ವಿಚಾರಕಿ ವೇದಾವತಿ, ಸಿ ಎಸ್ ಸಿ ತಾಲೂಕು ನೋಡಲ್ ಅಧಿಕಾರಿ ಲೋಹಿತ್, ಸಿ ಎಸ್ ಸಿ ಸೇವಾದಾರರು, ಒಕ್ಕೂಟ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

Related Articles

Back to top button