ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಏನು?

Views: 54
ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಮೂಕಾಂಬಿಕಾ ದೇವಿಯ ಭಕ್ತರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಸರ್ಕಾರ ಆಡಳಿತ ಮಂಡಳಿಯ ಜೊತೆಗೆ ಸಭೆ ನಡೆಸಿ ಮೂಲಭೂತ ಸೌಕರ್ಯಗಳ ಪಟ್ಟಿ ನೀಡುವಂತೆ ಸೂಚನೆಯನ್ನು ಕೂಡ ಈಗಾಗ್ಲೆ ಕೊಟ್ಟಾಗಿದೆ.
ಪ್ರತಿ ವರ್ಷ ಸುಮಾರು 45 ರಿಂದ 50 ಲಕ್ಷ ಭಕ್ತರು ಆಗಮಿಸುವ ಧಾರ್ಮಿಕ ಕೇಂದ್ರದಲ್ಲಿ ಮೂಲ ಸೌಕರ್ಯಗಳ ನೀಡುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ತಯಾರಿಕೆ ಸರ್ಕಾರ ಮುಂದಾಗಿದೆ. ಹಾಗಾಗಿ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ದೇವಾಲಯ ಆಡಳಿತ ಮಂಡಳಿ ಪದಾಧಿಕಾರಿಗಳು, ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಈ ತಿಂಗಳ 3೦ ರೊಳಗೆ ಆಡಳಿತ ಮಂಡಳಿ ಏನು ತೀರ್ಮಾನ ತೆಗೆದುಕೊಳ್ಳುತ್ತೋ, ಅದನ್ನು ಅನುಮೋದನೆ ಪಡೆದು ಸರ್ಕಾರಕ್ಕೆ ಕಳುಹಿಸಿ ಅಂತ ಹೇಳಿದ್ದೀನಿ ತಾಕೀತು ಮಾಡಿದ್ದಾರೆ. ಅಲ್ಲದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ಅಧಿಕಾರಿಗಳ ತಂಡ, ಆರ್ಕಿಟೆಕ್ಟ್, ಪಂಡಿತರು ಹೋಗಿ ಕೊಲ್ಲೂರಿನಲ್ಲಿ ಏನೇನು ಕಾಮಗಾರಿ ಆಗಬೇಕು ಅಂತ ಸಮಿತಿ ಹೇಳಿರೋದನ್ನು ವೀಕ್ಷಣೆ ಮಾಡಿ ಎಂದಿದ್ದಾರೆ.
ಪ್ರಮುಖವಾಗಿ ಭಕ್ತರಿಗೆ ಅವಶ್ಯಕತೆ ಇರುವ ವಸತಿ, ದಾಸೋಹ, ರಸ್ತೆ, ಸ್ನಾನಗೃಹ, ಒಳಚರಂಡಿ ವ್ಯವಸ್ಥೆ ರಥ ಬೀದಿ, ಆಶ್ಲೇಷ ಭವನ ಸೇರಿದಂತೆ ದೇವಸ್ಥಾನ ಸಿಬ್ಬಂದಿಗೆ ಕ್ವಾಟ್ರಸ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ರಾಮಲಿಂಗರೆಡ್ಡಿ ಸೂಚಿಸಿದ್ದಾರೆ. ಒಟ್ಟಿನಲ್ಲಿ ಸರ್ಕಾರ ರಾಜ್ಯದಲ್ಲಿ ಮುಜರಾಯಿ ಇಲಾಖೆ ಅಡಿ ಬರುವ ದೇವಾಲಯಗಳ ಅಭಿವೃದ್ಧಿಗೆ ಸಾಕಷ್ಟು ಸರ್ಕಸ್ ಮಾಡ್ತಿದೆ. ಆ ಮೂಲಕ ಭಕ್ತರಿಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪಡೆಸುವ ಮೂಲಕ ಮತ್ತಷ್ಟು ಭಕ್ತರನ್ನು ಸೆಳೆಯೋಕೆ ಪ್ಲಾನ್ ಮಾಡಿಕೊಂಡಿದ್ದಾರೆ.