ಸಾಮಾಜಿಕ
ರೋಟರಿ ಕ್ಲಬ್ ಕೋಟೇಶ್ವರ ಹಾಗೂ ರೋಟರಾಕ್ಟ್ ಕ್ಲಬ್ ವತಿಯಿಂದ ‘ರಸ್ತೆ ಸುರಕ್ಷತೆ ಜಾಗೃತಿ’ ಕಾರ್ಯಕ್ರಮ

Views: 18
ಕನ್ನಡ ಕರಾವಳಿ ಸುದ್ದಿ: ರೋಟರಿ ಕ್ಲಬ್ ಕೋಟೇಶ್ವರ ಹಾಗೂ ರೋಟರಾಕ್ಟ್ ಕ್ಲಬ್ ಕೋಟೇಶ್ವರ ವತಿಯಿಂದ ‘ರಸ್ತೆ ಸುರಕ್ಷತೆ ಜಾಗೃತಿ’ ಕಾರ್ಯಕ್ರಮ ಕೋಟೇಶ್ವರ ಬೈಪಾಸ್ ರಸ್ತೆಯಲ್ಲಿ ನಡೆಸಲಾಯಿತು.
ರೋಟರಿ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಬಸ್ಸುಗಳಿಗೆ ಸ್ಟಿಕ್ಕರ್ ಗಳನ್ನು ಅಂಟಿಸುವ ಮೂಲಕ ಚಾಲನೆ ನೀಡಿದರು.
ರೋಟರಿ ಅಧ್ಯಕ್ಷ ಮಾತನಾಡಿ, ಇಂದಿನ ಕಾಲದಲ್ಲಿ ರಭಸವಾಗಿ ಸಾಗುವ ಭರದಲ್ಲಿ ಅವಘಡ ಸಂಭವಿಸುವ ಕಾರಣ ಜನರಲ್ಲಿ ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಕಾರಣದಿಂದ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.
ನಿಕಟಪೂರ್ವ ಸಹಾಯಕ ಗವರ್ನರ್ ಪ್ರಭಾಕರ್ ಕುಂಭಾಶಿ, ಮಾಜಿ ಅಧ್ಯಕ್ಷ ನಾಗರಾಜ್ ಆಚಾರ್, ಜೊತೆ ಕಾರ್ಯದರ್ಶಿ ಚಂದ್ರಹಾಸ್ ಗಾಣಿಗ ಉದಯ್ ಕುಮಾರ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ ರೊಟ್ರಾಕ್ಟ್ ಅಧ್ಯಕ್ಷೆ ಪ್ರಾಂಜಲಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಚಂದ್ರಹಾಸ್ ಗಾಣಿಗ ವಂದಿಸಿದರು.