ಕಾಳಾವರ:ನಮ್ಮ ಪ್ರಗತಿ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ (ರಿ) ಉದ್ಘಾಟನೆ

Views: 115
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ನಮ್ಮ ಪ್ರಗತಿ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ(ರಿ) ಕಾಳಾವರ ಇದರ ಉದ್ಘಾಟನೆ ಕಾಳಾವರದ ಡಾ.ಬಿ. ಆರ್. ಅಂಬೇಡ್ಕರ್ ಸಮಾಜ ಮಂದಿರದಲ್ಲಿ ಅಗಸ್ಟ್ 31ರಂದು ನಡೆಯಿತು.
ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಂಜುನಾಥ ಶೆಟ್ಟಿಗಾರ್ ಡಾ. ಬಿ. ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ನಮ್ಮ ಗ್ರಾಮ ಪಂಚಾಯತ್ ನಿಂದ ಸಂಸ್ಥೆಗೆ ಸಂಪೂರ್ಣ ಸಹಕಾರ ಕೊಡುತ್ತೇವೆ ಚೆನ್ನಾಗಿ ನಡೆಸಿಕೊಂಡು ಹೋಗಿ ಹಾಗೂ ಈ ಸಂಸ್ಥೆ ಯಿಂದಲೂ ಗ್ರಾಮ ಪಂಚಾಯತ್ ಗೆ ಸಹಕಾರ ಇರಲಿ ಎಂದು ಶುಭ ಹಾರೈಸಿದರು,
ಸಂಸ್ಥೆಯ ಮೂಲ ಉದ್ದೇಶ ಹಾಗೂ ಬೈಲಾವನ್ನು ಪತ್ರಕರ್ತ ಜಯಶೇಖರ್ ಮಡಪ್ಪಾಡಿ ಉದ್ಘಾಟಿಸಿ, ಮಾತನಾಡಿ ಸಂಸ್ಥೆಯ ಉದ್ದೇಶ ಈಡೇರಲಿ ನಮ್ಮ ಸಹಕಾರ ಹಾಗೂ ಬೆಂಬಲ ಸದಾ ಇದೆ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ನಮ್ಮ ಪ್ರಗತಿ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ್ ಜಿ ಮಾತನಾಡಿ, ನಮ್ಮ ಸಂಸ್ಥೆ ಪ. ಜಾತಿ / ಪ. ಪಂ, ಮೇಲಾಗುವ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣ ಹಾಗೂ ಸುಸ್ಥಿರ ಸಮುದಾಯ ಆಗಬೇಕು ಅನ್ನುವುದು ನಮ್ಮ ಸಂಸ್ಥೆಯ ಮೂಲ ಉದ್ದೇಶ ಈ ಉದ್ದೇಶ ಇಟ್ಟುಕೊಂಡು ಸಂಸ್ಥೆ ಪ್ರಾರಂಭಿಸಿದ್ದೇವೆ ಎಲ್ಲರ ಸಹಕಾರ, ಬೆಂಬಲ ಅಗತ್ಯ ಎಂದರು.
ಮುಖ್ಯ ಅಥಿತಿಗಳಾಗಿ ಎಮ್. ಪಿ ಸಂಜೀವ ಮಾಸ್ಟರ್ ಅಧ್ಯಕ್ಷರು ಡಾ. ಬಿ. ಆರ್ ಅಂಬೇಡ್ಕರ್ ಆದಿ ದ್ರಾವಿಡ ಸೇವಾ ಸಮಿತಿ ಕಾಳಾವರ, ರಘುವೀರ. ಕೆ ಉಪಾಧ್ಯಕ್ಷರು ಡಾ. ಬಿ. ಆರ್ ಅಂಬೇಡ್ಕರ್ ಆದಿ ದ್ರಾವಿಡ ಸೇವಾಸಮಿತಿ ಕಾಳಾವರ, ಸುಬ್ಬಣ್ಣ ಕೋಣಿ ಮುಖ್ಯೋಪಾಧ್ಯಾಯರು ನಿವೇದಿತ ಪ್ರೌಢಶಾಲೆ ಬಸ್ರೂರು, ವಿಜೇಂದ್ರ ಮೂಡ್ಲುಕಟ್ಟೆ ತಾಲೂಕು ಪಂಚಾಯತ್ ಕುಂದಾಪುರ, ಎಸ್ ವಿ ನಾಗರಾಜ್ ಉಪಾಧ್ಯಕ್ಷರು ಪ್ರಗತಿ ಸಂಸ್ಥೆ ಕಾಳಾವರ, ಡಾ. ಬಿ. ಆರ್. ಅಂಬೇಡ್ಕರ್ ಆದಿ ದ್ರಾವಿಡ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ನಮ್ಮ ಪ್ರಗತಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಊರಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಇದ್ದು ಸಾಕ್ಷಿಯಾದರು. ನಮ್ಮ ಪ್ರಗತಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಬಿ. ಮೋಹನ್ ಚಂದ್ರ ಕಾಳಾವರ್ಕರ್ ಅವರು ಕಾರ್ಯಕ್ರಮವನ್ನು ಸಂಯೋಜಿಸಿ, ವಂದನಾರ್ಪಣೆಗೈದರು.