ಸಾಮಾಜಿಕ

ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ:39ನೇ ವಾರ್ಷಿಕ ಮಹಾಸಭೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ 

Views: 211

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ ಇದರ 39ನೇ ವಾರ್ಷಿಕ ಮಹಾಸಭೆ ಮತ್ತು 19ನೇ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಕೋಟೇಶ್ವರದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಅಗಸ್ಟ್ 31 ರಂದು ನಡೆಯಿತು. 

ಕಾರ್ಯಕ್ರಮಕ್ಕೆ ಗೌರವಾನ್ವಿತರಾಗಿ ಆಗಮಿಸಿದ ಉಡುಪಿ ಮತ್ತು ಚಿಕ್ಕಮಂಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, “ಪ್ರತಿಯೊಂದು ಸಮಾಜದವರು ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ಕಂಟಕರಾಗದೆ ಜನಾನುರಾಗಿ ಸಾಮಾನ್ಯ ಜನರನ್ನು ಪ್ರೀತಿಸುವ ಗುಣ ಇರಬೇಕು. ಈ ನಿಟ್ಟಿನಲ್ಲಿ ಪದ್ಮಶಾಲಿ ಜನಾಂಗದವರಲ್ಲಿ ಪ್ರಾಮಾಣಿಕತೆ. ಶ್ರದ್ಧೆ, ನಿಷ್ಠೆ, ಸರಳ ಸಜ್ಜನಿಕೆಯಿಂದ ಬಾಳುತ್ತಿದ್ದಾರೆ. ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯವನ್ನು ನಿರ್ಮಾಣ ಮಾಡುತ್ತಿರುವುದು ಉತ್ಕೃಷ್ಟವಾದ ಕೆಲಸವಾಗಿದೆ ಎಂದು ಶುಭ ಹಾರೈಸಿದರು.

ಬೆಂಗಳೂರಿನ ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ನಾಗರಾಜ್ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು.

ಸಂಘದ ಅಧ್ಯಕ್ಷ ಡಾ. ಚಂದ್ರಶೇಖರ್ ವಿ ಎಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಹರ್ಷ ಫೌಂಡೇಶನ್ ಸಾಲಿಕೇರಿ(ಮುಂಬಯಿ) ಟ್ರಸ್ಟಿ ಬಾಲಕೃಷ್ಣ ಶೆಟ್ಟಿಗಾರ್, ದ.ಕ ಪದ್ಮಶಾಲಿ ಮಹಾಸಭಾ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ, ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್, ಕುಂದಾಪುರ ಸಬ್ ಪೋಸ್ಟ್ ಮಾಸ್ಟರ್  ಸವಿತಾ ಭಾಸ್ಕರ್ ಶೆಟ್ಟಿಗಾರ ಸಾಸ್ತಾನ, ಉದ್ಯಮಿ ರವೀಂದ್ರ ಶೆಟ್ಟಿಗಾರ ಹೂವಿನಕೆರೆ, ಸಮಾಜ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರು ಡಾ. ಬಸವರಾಜ್ ಶೆಟ್ಟಿಗಾರ್, ಮಹಿಳಾ ವೇದಿಕೆಯ ಸಂಚಾಲಕಿ ರಾಜೀವಿ ಶೆಟ್ಟಿಗಾರ್ ಉಪಸ್ಥಿತರಿದ್ದರು. 

ಯೋಗ ಶಿಕ್ಷಕರಾದ ಅಣ್ಣಪ್ಪ ಶೆಟ್ಟಿಗಾರ ಮತ್ತು ಗೀತಾ ಅಣ್ಣಪ್ಪ ಶೆಟ್ಟಿಗಾರ್, ನಾಟಿ ವೈದ್ಯರಾದ ಅಸೋಡು ಬಸವರಾಜ್ ಶೆಟ್ಟಿಗಾರ್, ಸಂಘದ ಮಾಜಿ ಅಧ್ಯಕ್ಷರಾದ ಜನಾರ್ಧನ್ ಶೆಟ್ಟಿಗಾರ್, ಮಾಜಿ ಕಾರ್ಯದರ್ಶಿ ವೆಂಕಟೇಶ್ ಶೆಟ್ಟಿಗಾರ್ ಮಾಜಿ ಕೋಶಾಧಿಕಾರಿ ಕೃಷ್ಣಮೂರ್ತಿ ಶೆಟ್ಟಿಗಾರ್, ಪ್ರೇಮ ಮಂಜುನಾಥ್ ಶೆಟ್ಟಿಗಾರ್, ಕೋಟೇಶ್ವರ ವಲಯದ ಹಿರಿಯ ಸಮಾಜ ಬಾಂಧವರಾದ ಅಹಲ್ಯ ಶೆಟ್ಟಿಗಾರ್, ಚಂದು ಶೆಟ್ಟಿಗಾರ್, ವಕ್ವಾಡಿ ಹಲ್ತೂರುಮನೆ ಮಹಾಬಲ ಶೆಟ್ಟಿಗಾರ್, ಅಸೋಡು ಉಮೇಶ್ ಶೆಟ್ಟಿಗಾರ ಇವರನ್ನು ಸನ್ಮಾನಿಸಲಾಯಿತು.

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಜನಾ ಮತ್ತು ಮಂಜಿತ್ ಎಸ್ ಪದ್ಮಶಾಲಿ ಇವರನ್ನು ಗೌರವಿಸಲಾಯಿತು. 

ವಕ್ವಾಡಿ ದೇವುಮನೆ ಶ್ರೀಮತಿ ದುರ್ಗಿ ಮತ್ತು ಶ್ರೀ ಶೀನ ಶೆಟ್ಟಿಗಾರ ಸ್ಮರಣಾರ್ಥ ದತ್ತಿ ನಿಧಿಯಿಂದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ವಿತರಿಸಲಾಯಿತು.

ಕಾಳಾವರ ಗಣಪಯ ಶೆಟ್ಟಿಗಾರ್ ವಿರಚಿತ ‘ಉಪ ಕಥೆಗಳು’ ಪುಸ್ತಕವನ್ನು ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಬಿಡುಗಡೆಗೊಳಿಸಿದರು.

ಡಾ.ಬಸವರಾಜ್ ಶೆಟ್ಟಿಗಾರ್ ಪ್ರಸ್ತಾವಿಕವಾಗಿ ಮಾತನಾಡಿದರು.ಜನಾರ್ದನ್ ಶೆಟ್ಟಿಗಾರ್ ವಕ್ವಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಮೋದ್ ಶೆಟ್ಟಿಗಾರ್, ಬೀಜಾಡಿ ವರದಿ ವಾಚಿಸಿದರು. ಕೋಶಾಧಿಕಾರಿ ಇಂದಿರಾ ಜಿ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.ಉಷಾ ರವೀಂದ್ರ ಶೆಟ್ಟಿಗಾರ್ ರಕ್ಷಿತಾ ಶೆಟ್ಟಿಗಾರ್, ಸೌಜನ್ಯ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು ರಾಜೀವಿ ಶೆಟ್ಟಿಗಾರ್ ಮಹಿಳಾ ಸಂಚಾಲಕಿ ಇವರು ಧನ್ಯವಾದ ಸಮರ್ಪಿಸಿದರು.

 

 

Related Articles

Back to top button