ಮೆರವಣಿಗೆ ವೇಳೆ ಶ್ರೀಕೃಷ್ಣ ರಥಕ್ಕೆ ವಿದ್ಯುತ್ ಸ್ಪರ್ಶಿಸಿ ಐವರು ದುರಂತ ಅಂತ್ಯ

Views: 161
ಕನ್ನಡ ಕರಾವಳಿ ಸುದ್ದಿ: ಶ್ರೀಕೃಷ್ಣ ರಥಕ್ಕೆ ವಿದ್ಯುತ್ ಸ್ಪರ್ಶಿಸಿ ಐವರ ದುರ್ಮರಣ ಹೊಂದಿರುವ ಘಟನೆ ಹೈದ್ರಾಬಾದ್ ನ ಉಪ್ಪಲ್ ಠಾಣಾ ವ್ಯಾಪ್ತಿಯ ರಾಮಂತಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮೆರವಣಿಗೆ ವೇಳೆ ರಥ ಎಳೆಯುತ್ತಿದ್ದಾಗ ದುರಂತ ಸಂಭವಿಸಿದೆ.
ಮೃತರಲ್ಲಿ ಕೃಷ್ಣ ಯಾದವ್ (24), ಅಂಜಿ ರೆಡ್ಡಿ ಅವರ ತಂದೆ ಶ್ರೀಕಾಂತ್ ರೆಡ್ಡಿ (35), ಸುರೇಶ್ ಯಾದವ್ (34), ರುದ್ರ ವಿಕಾಸ್ (39), ರಾಜೇಂದ್ರ ರೆಡ್ಡಿ (39) ಮೃತ ದುರ್ದೈವಿಗಳು. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಲ್ ಠಾಣೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಮೆರವಣಿಗೆ ವೇಳೆ ರಥ ಎಳೆಯುತ್ತಿದ್ದಾಗ ದುರಂತ ಸಂಭವಿಸಿದೆ. ದುರಂತದಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಶ್ರೀಕೃಷ್ಣ ಶೋಭಾ ಯಾತ್ರೆ ಮುಕ್ತಾಯ ಬಳಿಕ ಘಟನೆ ನಡೆದಿದೆ.
ರಥವನ್ನು ತಳ್ಳುವಾಗ ವಿದ್ಯುತ್ ತಂತಿಗಳು ಸ್ಪರ್ಶಿಸಿ ಸಂಭವಿಸಿದ ಅವಘಡ ಇದು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.