ಸಾಮಾಜಿಕ
ಕೇರಳದ ಮಹಿಳೆ ಮಗುವನ್ನು ಕೊಂದು ಶಾರ್ಜಾದಲ್ಲಿ ಆತ್ಮಹತ್ಯೆ

Views: 117
ಕನ್ನಡ ಕರಾವಳಿ ಸುದ್ದಿ: ಕೇರಳದ ಮಹಿಳೆಯೊಬ್ಬರು ತನ್ನ ಮಗುವನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಾರ್ಜಾದಲ್ಲಿ ನಡೆದಿದೆ.
ಶಾರ್ಜಾದ ಅಲ್ ನಹ್ಲಾದಲ್ಲಿ ವಾಸಿಸುತ್ತಿದ್ದ 32 ವರ್ಷದ ವಿಪಂಜಿಕಾ ಮಣಿ ತನ್ನ ಒಂದೂವರೆ ವರ್ಷದ ಮಗಳು ವೈಭವಿಯನ್ನು ಹತ್ಯೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಗೆ ವರದಕ್ಷಿಣೆಯ ಕಿರುಕುಳ ಕಾರಣ ಎಂಬ ಆರೋಪ ಕೇಳಿ ಬಂದಿದೆ. ವಿಪಂಜಿಕಾ ಪತಿ ನಿಧೀಶ್, ಆತನ ಸಹೋದರಿ ಹಾಗೂ ತಂದೆಯ ಮೇಲೆ ದೂರು ದಾಖಲಿಸಲಾಗಿದೆ.
ವಿಪಂಜಿಕಾ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿದ್ದಾರೆ. ಮಾವ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದು, ನಿಧೀಶ್ ಗೆ ತಿಳಿಸಿದಾಗ ಆತ ಏನು ಮಾಡಲಿಲ್ಲ. ತನ್ನ ತಂದೆಗಾಗಿಯೂ ಮದುವೆಯಾಗಿದ್ದೇನೆ ಎಂದು ಹೇಳಿದ್ದ. ನನಗೆ ಚಿತ್ರಹಿಂಸೆ ನೀಡಿ ನಾಯಿಯಂತೆ ಹೊಡೆದನು. ನನಗೆ ಇನ್ನು ಸಹಿಸಲು ಸಾಧ್ಯವಿಲ್ಲ. ಅವರನ್ನು ಬಿಡಬೇಡಿ ಎಂದು ಬರೆದಿದ್ದಾರೆಂದು ತಿಳಿದು ಬಂದಿದೆ.