ಜನಮನ

ವಾಹನ ಸವಾರರಿಗೆ ಗುಡ್ ನ್ಯೂಸ್..! ಅಗಸ್ಟ್ 15 ರಿಂದ ವಾರ್ಷಿಕ ಟೋಲ್ ಪಾಸ್.. ಏನಿದು ಹೊಸ ನಿಯಮ!

Views: 113

ಕನ್ನಡ ಕರಾವಳಿ ಸುದ್ದಿ: ಫಾಸ್ಟ್ ಟ್ಯಾಗ್ ಆಧರಿತ ವಾರ್ಷಿಕ ಪಾಸ್ ಜಾರಿಗೆ ತರಲು ಕೇಂದ್ರ ಸರ್ಕಾರದ ನಿರ್ಧಾರ ಮಾಡಿದ್ದು, ಆಗಸ್ಟ್ 15, 2025 ರಿಂದ ವಾರ್ಷಿಕ ಟೋಲ್ ಪಾಸ್ ನೀಡಲಾಗುತ್ತದೆ.

ವಾರ್ಷಿಕ 3 ಸಾವಿರ ರೂಪಾಯಿಗೆ ಟೋಲ್ ಪಾಸ್ ಪಡೆದು ಒಂದು ವರ್ಷಗಳ ಕಾಲ ರಾಷ್ಟ್ರ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಮಾಡಬಹುದಾಗಿದೆ ಎಂದು ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ.

ಏನಿದು ಹೊಸ ನಿಯಮ!

–ಆಗಸ್ಟ್ 15, 2025 ರಿಂದ ವಾರ್ಷಿಕ ಟೋಲ್ ಪಾಸ್ ವಿತರಣೆ

–3 ಸಾವಿರ ರೂ.ಗೆ ಟೋಲ್ ಪಾಸ್.. ಒಂದು ವರ್ಷ ಸಂಚಾರ

—ಒಂದು ವರ್ಷ ಅಥವಾ 200 ಟ್ರಿಪ್ ಸಂಚಾರಕ್ಕೆ ಅವಕಾಶ

–ಕಾರ್, ಜೀಪ್, ವ್ಯಾನ್ ಗಳಿಗೆ ವಾರ್ಷಿಕ ಟೋಲ್ ಪಾಸ್

—ನಾನ್ ಕಮರ್ಷಿಯಲ್ ವಾಹನಗಳಿಗೆ ಮಾತ್ರ ವಾರ್ಷಿಕ ಪಾಸ್

ಕೇಂದ್ರ ಸಾರಿಗೆ ಇಲಾಖೆಯು ನಾನ್ ಕಮರ್ಷಿಯಲ್ ವಾಹನಗಳಿಗೆ ಮಾತ್ರವೇ ವಾರ್ಷಿಕ ಟೋಲ್ ಪಾಸ್ ನೀಡಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಕಾರು, ಜೀಪ್, ವ್ಯಾನ್ ಗಳಿಗೆ  ಟೋಲ್ ಪಾಸ್ ನೀಡಲಿದೆ.

Related Articles

Back to top button