ಸಾಂಸ್ಕೃತಿಕ

ಯಕ್ಷಗಾನ ವೇಷ ಧರಿಸಿ ಚಾಮುಂಡಿ ತಾಯಿ ದರ್ಶನ ಪಡೆದ ರವಿ ಬಸ್ರೂರು, ಚಿತ್ರತಂಡ

Views: 148

ಕನ್ನಡ ಕರಾವಳಿ ಸುದ್ದಿ: ‘ವೀರ ಚಂದ್ರಹಾಸ’ ಚಿತ್ರದ ನಿರ್ದೇಶಕ‌ ರವಿ ಬಸ್ರೂರು ಅವರು, ಯಕ್ಷಗಾನ ವೇಷದಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.

ಕನ್ನಡದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಅರ್ಪಿಸಿರುವ ಸಿನಿಮಾಗೆ, ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಆ್ಯಕ್ಷನ್ ಕಟ್ ಹೇಳಿದ್ದಾರೆ. ದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಕಲೆಯ ಹಿನ್ನೆಲೆ, ಹಿರಿಮೆಯನ್ನು ನಾಡಿನ ಜನತೆಗೆ ಹೇಳುವ ನಿಟ್ಟಿನಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ಯಕ್ಷಗಾನ ಪ್ರಸಂಗ ಆಧಾರಿತ ‘ವೀರ ಚಂದ್ರಹಾಸ’ ಕನ್ನಡ ಚಿತ್ರ ಕಳೆದ ಶುಕ್ರವಾರದಂದು ರಾಜ್ಯಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರಿಂದ ಬಹುತೇಕ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಚಿತ್ರತಂಡ ಭೇಟಿ ಕೊಟ್ಟಿದ್ದು, ರವಿ ಬಸ್ರೂರು ಅವರು ಯಕ್ಷಗಾನ ವೇಷ ಧರಿಸಿ ದೇವಿಯ ದರ್ಶನ ಪಡೆದುಕೊಂಡರು. ಈ ವೇಳೆ ಮಾತನಾಡಿದ ರವಿ ಬಸ್ರೂರ್, ವೀರ ಚಂದ್ರಹಾಸ ನಿನಿಮಾ ಮಾಡಬೇಕೆಂಬುದು ನನ್ನ ಹಲವು ವರ್ಷಗಳ ಕನಸು. ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆಂದು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದೇನೆ. ಚಿತ್ರದ ಎಲ್ಲಾ ಪಾತ್ರಗಳನ್ನು ವೃತ್ತಿಪರ ಯಕ್ಷಗಾನ ಕಲಾವಿದರೇ ನಿರ್ವಹಿಸಿದ್ದಾರೆ. ಹಾಗಾಗಿ, ಇಡೀ ಚಿತ್ರ ಬಹಳ ನೈಜವಾಗಿ ಮೂಡಿಬಂದಿದೆ ಎಂದರು. ವಿಶೇಷ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಭಿನಯಿಸುವ ಮೂಲಕ ನಮಗೆ ಆಶೀರ್ವದಿಸಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಯಕ್ಷಗಾನ ನಮ್ಮೆಲ್ಲರ ಹೆಮ್ಮೆ. ನಮ್ಮ ಸಿನಿಮಾಗೆ ತಾಯಿಯ ಆಶೀರ್ವಾದ ಪಡೆಯಲು ಚಿತ್ರತಂಡ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದೇವೆ ಎಂದರು.

Related Articles

Back to top button