ಆರ್ಥಿಕ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 2,691 ಹುದ್ದೆಗಳ ಅರ್ಜಿ ಸಲ್ಲಿಕೆಯ ದಿನಾಂಕ ವಿಸ್ತರಿಸಿದೆ .. ಕೊನೆ ದಿನ ಯಾವುದು ಇಲ್ಲಿದೆ ಮಾಹಿತಿ

Views: 152

ಕನ್ನಡ ಕರಾವಳಿ ಸುದ್ದಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 1961ರ ಕಾಯ್ದೆ ಪ್ರಕಾರ ಅಪ್ರೆಂಟೀಸ್ ಉದ್ಯೋಗಗಳನ್ನು ಆಹ್ವಾನ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಅಂತಿಮ ಗಡುವು ಈಗಾಗಲೇ ಮುಗಿದಿದೆ. ಆದರೆ ಇದೀಗ ಬ್ಯಾಂಕ್ ದಿನಾಂಕವನ್ನು ವಿಸ್ತರಣೆ ಮಾಡಿದೆ.

ಮಾರ್ಚ್ 12ರ ವರೆಗೆ ದಿನಾಂಕವನ್ನು ಬ್ಯಾಂಕ್ ವಿಸ್ತರಣೆ ಮಾಡಿದ್ದು ಅರ್ಜಿ ಸಲ್ಲಿಕೆ ಮಾಡದೇ ಇರುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.ಆನ್ಲೈನ್ ಮೂಲಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಸತಿ ಬದಲಿಗೆ ಸ್ಟೇಫಂಡ್ ನೀಡುತ್ತದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಜೊತೆಗೆ ಸ್ಟೇಫಂಡ್ ನೀಡುತ್ತದೆ. ಇದು ಹೊಸದಾಗಿ ಕೆಲಸಕ್ಕೆ ಸೇರುವ ಅಭ್ಯರ್ಥಿಗಳಿಗೆ ಉತ್ತಮವಾದ ಅವಕಾಶವಾಗಿದೆ. ಹೀಗಾಗಿ ಪದವಿ ಮುಗಿಸಿದ ಪ್ರತಿ ಅಭ್ಯರ್ಥಿಗಳು ಈ ಉದ್ಯೋಗಕ್ಕೆ ಪ್ರಯತ್ನ ಮಾಡಬಹುದು. ಇನ್ನೊಂದು ವಿಶೇಷ ಎಂದರೆ 2 ಸಾವಿರಕ್ಕೂ ಅಧಿಕ ಉದ್ಯೋಗಗಳಲ್ಲಿ ಕರ್ನಾಟಕಕ್ಕೂ 305 ಉದ್ಯೋಗಗಳು ಮೀಸಲಿವೆ. ಕನ್ನಡಿಗರಿಗೂ ಅವಕಾಶ ಇದೆ.

ಇನ್ನು ಅರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಆಯ್ಕೆಯ ಮಾಡನದಂಡಗಳು, ಪ್ರಮುಖ ದಿನಾಂಕ, ಅರ್ಜಿ ಪ್ರಕ್ರಿಯೆಯ, ಪರೀಕ್ಷೆಗಳ ಬಗ್ಗೆ ಮಾಹಿತಿ ಸಂಪೂರ್ಣವಾಗಿ ಇಲ್ಲಿ ವಿವರಿಸಲಾಗಿದೆ. ಆಸಕ್ತರು ಲಿಂಕ್ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ- ಮಾರ್ಚ್- 12

ನ್ಯೂಸ್ಫಸ್ಟ್ ಲಿಂಕ್- https://newsfirstlive.com/union-bank-of-india-apprentice-recruitment-2025-notification-out/

Related Articles

Back to top button