ಆರ್ಥಿಕ

ಲಾಕರ್‌ನಲ್ಲಿಟ್ಟಿದ್ದ 4 ಕೋಟಿ ಚಿನ್ನ ಕದ್ದ ಬ್ಯಾಂಕ್‌ ಸಹಾಯಕ ಮ್ಯಾನೇಜರ್‌ ಸೆರೆ

Views: 36

ಕನ್ನಡ ಕರಾವಳಿ ಸುದ್ದಿ: 4 ಕೋಟಿ ಮೌಲ್ಯದ ಚಿನ್ನವನ್ನು ತೆಗೆದುಕೊಂಡು ಫೈನಾನ್‌್ಸಗಳಲ್ಲಿ ಅಡವಿಟ್ಟು ಹಣ ಪಡೆದು ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಕ್ಯಾಸಿನೋಗೆ ಬಳಸಿಕೊಂಡಿದ್ದ ಬ್ಯಾಂಕ್‌ವೊಂದರ ಸಹಾಯಕ ಮ್ಯಾನೇಜರ್‌ನನ್ನು ಗಿರಿನಗರ ಠಾಣೆ ಪೊಲೀಸರು ಬಂದಿಸಿದ್ದಾರೆ.

ಗಿರಿನಗರದ ಇಂಡಿಯನ್‌ ಬ್ಯಾಂಕ್‌ನ ಸಹಾಯಕ ಮ್ಯಾನೇಜರ್‌ ಕಿರಣ್‌ಕುಮಾರ್‌ (35)ಬಂಧಿತ ಆರೋಪಿ. ಈತನಿಂದ 700 ಗ್ರಾಂ ಆಭರಣವನ್ನು ವಶಪಡಿಸಿಕೊಂಡಿದ್ದು, ಉಳಿದ ಆಭರಣ ಗಳನ್ನು ವಶಪಡಿಸಿಕೊಳ್ಳುವ ಕಾರ್ಯ ಮುಂದುವರೆದಿದೆ. ಕಳೆದ ಜೂನ್‌ನಲ್ಲಿ ಕಿರಣ್‌ಕುಮಾರ್‌ ಈ ಬ್ಯಾಂಕ್‌ಗೆ ವರ್ಗಾವಣೆಯಾಗಿ ಬಂದಿದ್ದಾನೆ.

ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಕ್ಯಾಸಿನೋಗೆ ದಂದೆಗೆ ಸಿಲುಕಿದ್ದ ಕಿರಣ್‌ಕುಮಾರ್‌ ತನ್ನ ಜೂಜಾಟಕ್ಕೆ ಬಳಸಿಕೊಂಡಿದ್ದು ಗ್ರಾಹಕರು ಬ್ಯಾಂಕ್‌ನ ಲಾಕರ್‌ನಲ್ಲಿಟ್ಟಿದ್ದ ಚಿನ್ನವನ್ನು. ಬ್ಯಾಂಕ್‌ ಮ್ಯಾನೇಜರ್‌ಗೆ ಹಾಗೂ ಇತರೆ ಸಿಬ್ಬಂದಿಗಳಿಗೆ ಗೊತ್ತಾಗದ ರೀತಿ ಕಳೆದ ಆರು ತಿಂಗಳಿಂದ ಗ್ರಾಹಕರು ಇಟ್ಟಿದ್ದ ಸೇಫ್ಟಿ ಲಾಕರ್‌ಗಳ ಕೀಗಳನ್ನು ತೆಗೆದುಕೊಂಡು ಗ್ರಾಹಕರ 2ಕೆಜಿ 780 ಗ್ರಾಂ ಬಂಗಾರವನ್ನು ಕಳ್ಳತನ ಮಾಡಿಕೊಂಡು ಹೋಗಿ ಆ ಆಭರಣಗಳನ್ನು ಮುತ್ತೂಟ್‌ ಫೈನಾನ್‌್ಸ ಮತ್ತು ಮಣಿಪುರ ಗೋಲ್‌್ಡಲೋನ್‌ನಲ್ಲಿ ಅಡವಿಟ್ಟು ಹಣ ಪಡೆದು ಆ ಹಣವನ್ನು ಜೂಜಿನ ಚಟಕ್ಕೆ ಬಳಸಿಕೊಂಡಿದ್ದಾನೆ.

ಗ್ರಾಹಕರೊಬ್ಬರು ತಾವು ಲಾಕರ್‌ನಲ್ಲಿಟ್ಟಿದ್ದ ಚಿನ್ನವನ್ನು ತೆಗೆದುಕೊಳ್ಳಲು ಬ್ಯಾಂಕಿಗೆ ಹೋದಾಗ ಲಾಕರ್‌ನಲ್ಲಿ ಆಭರಣ ಇರಲಿಲ್ಲ. ಇದರಿಂದ ಗಾಬರಿಯಾಗಿ ಅವರು ಬ್ಯಾಂಕ್‌ ಮ್ಯಾನೇಜರ್‌ ಅವರ ಗಮನಕ್ಕೆ ತಂದು ನಂತರ ಗಿರಿನಗರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಬ್ಯಾಂಕ್‌ನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಸಹಾಯಕ ಮ್ಯಾನೇಜರ್‌ ಕಿರಣ್‌ಕುಮಾರ್‌ ತೆಗೆದುಕೊಂಡಿರುವುದು ಗೊತ್ತಾಗಿದೆ.

ತಕ್ಷಣ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ 700 ಗ್ರಾಂ ಚಿನ್ನಾಭರಣ ವಶಕ್ಕೆಪಡೆದುಕೊಂಡಿದ್ದಾರೆ. ಉಳಿದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಗ್ರಾಹಕರು ಬ್ಯಾಂಕ್‌ ಲಾಕರ್‌ಗಳಲ್ಲಿ ಇಡುವ ಆಭರಣಗಳನ್ನು ಆಗಾಗ್ಗೆ ಹೋಗಿ ಚೆಕ್‌ ಮಾಡಿಕೊಳ್ಳಬೇಕೆಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್‌ ಬರಮಪ್ಪ ಅವರು ಗ್ರಾಹಕರಿಗೆ ಸಲಹೆ ನೀಡಿದ್ದಾರೆ.

Related Articles

Back to top button
error: Content is protected !!