ಇತರೆ

ಪರಸ್ಪರ ಪ್ರೀತಿಸಿ ಮದುವೆಯಾದ ಪತ್ನಿಗೆ ರೀಲ್ಸ್ ಹುಚ್ಚು; ಗಂಡನೊಂದಿಗೆ ಸಹಕಾರ ನೀಡದ ಪತ್ನಿಯ ನಿಗೂಢ ಕೊಲೆ!

Views: 32

ಕನ್ನಡ ಕರಾವಳಿ ಸುದ್ದಿ: ಕುಂಬಳಗೋಡು ಬಳಿ ಪತ್ನಿಯನ್ನು ಕೊಲೆ ಮಾಡಿ, ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾಗಿದ್ದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರದಲ್ಲಿ ಸಿಕ್ಕಿಬಿದ್ದ ಧೀರಜ್ ಕುಮಾರ್ (24), ವಿಚಾರಣೆ ವೇಳೆ ಕೊಲೆಗೆ ಕಾರಣ ಏನು ಎಂಬುದನ್ನು ಬಿಚ್ಚಿಟ್ಟಿದ್ದಾನೆ.

ಕುಂಬಳಗೋಡು ಗೇರುಪಾಳ್ಯದಲ್ಲಿ ಜುಲೈ 27ರಂದು ಪತ್ನಿ ರೀಮಾ ಕುಮಾರಿಯನ್ನು ಕೊಲೆ ಮಾಡಿದ್ದ ಧೀರಜ್ ಬಳಿಕ ಬಿಹಾರಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಕೆಲವು ದಿನಗಳ ನಂತರ ರೀಮಾ ಸ್ನೇಹಿತೆ ಆಕೆಗೆ ಕರೆ ಮಾಡಿದರೂ ಫೋನ್‌ ರಿಸೀವ್‌ ಆಗಿರಲಿಲ್ಲ. ಹೀಗಾಗಿ ಮನೆಗೆ ಹೋಗಿ ನೋಡಿದಾಗ ಮನೆಯಿಂದ ದುರ್ವಾಸನೆ ಬರುತ್ತಿರುವುದು ಗೊತ್ತಾಗಿದೆ. ಒಳಗೆ ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ರೀಮಾ ಕುಮಾರಿ ಶವ ಪತ್ತೆಯಾಗಿತ್ತು.

ಕಳೆದ ಡಿಸೆಂಬರ್‌ನಲ್ಲಿ ಕೆಲಸ ಅರಸಿ ಧೀರಜ್ ಮತ್ತು ರೀಮಾ ಬೆಂಗಳೂರಿಗೆ ಬಂದಿದ್ದರು. ಇಬ್ಬರೂ ಪರಸ್ಪರ ಪ್ರೀತಿಸಿ, ಮನೆಯವರಿಗೆ ತಿಳಿಸದೆ ಮದುವೆಯಾಗಿದ್ದರು. ಗೇರುಪಾಳ್ಯದ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ, ನಂತರ ಆಗಾಗ ಜಗಳವಾಡುತ್ತಿದ್ದರು. ಕೌಟುಂಬಿಕ ಕಲಹದಿಂದ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿತ್ತು.

ಬೆಂಗಳೂರಿಗೆ ಬಂದ ಬಳಿಕ ರೀಮಾ ಪತಿಯ ಮೇಲೆ ಆಸಕ್ತಿ ಕಳೆದುಕೊಂಡಿದ್ದಳು. ಮನೆಯಲ್ಲಿ ಹೆಚ್ಚು ಸಮಯ ರೀಲ್ಸ್ ಮಾಡುತ್ತಾ ಇರುತ್ತಿದ್ದಳು. ಅಲ್ಲದೇ ಲೈಂಗಿಕ ಕ್ರಿಯೆಗೂ ಸಹಕರಿಸುತ್ತಿರಲಿಲ್ಲ ಎನ್ನಲಾಗಿದೆ. ತನಗೆ ಬೇಕಾದಷ್ಟು ಮಾತ್ರ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದಳು. ತನಗೆ ಊಟ ಹಾಕುತ್ತಿರಲಿಲ್ಲ ಎಂಬ ವಿಚಾರವೂ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿತ್ತು ಎಂದು ಆರೋಪಿ ಹೇಳಿದ್ದಾನೆ.

ಇಷ್ಟೇ ಅಲ್ಲದೆ, ತಾನು ಮತ್ತೆ ಬಿಹಾರಕ್ಕೆ ವಾಪಸ್ ಹೋಗಬೇಕು ಎಂದು ರೀಮಾ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ. ಕೊಲೆ ನಡೆದ ದಿನ ಧೀರಜ್ ಮನೆಗೆ ಬಂದಾಗ ಊಟ ಇರಲಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆ ಸಣ್ಣ ಜಗಳ ಶುರುವಾಗಿದೆ. ಬಳಿಕ ಮಲಗೋಣ ಎಂದು ಧೀರಜ್ ಕರೆದರೂ ರೀಮಾ ಒಪ್ಪಿರಲಿಲ್ಲ. ಇದರಿಂದ ಜಗಳ ಮತ್ತಷ್ಟು ಜೋರಾಗಿದೆ.

ಈ ವೇಳೆ ರೀಮಾ ಮೊದಲು ದೊಣ್ಣೆಯಿಂದ ಧೀರಜ್‌ಗೆ ಹೊಡೆದಿದ್ದಳು. ಇದರಿಂದ ಕೋಪಗೊಂಡ ಧೀರಜ್ ವೇಲ್‌ನಿಂದ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಮುಖಕ್ಕೆ ಪ್ಲಾಸ್ಟಿಕ್ ಪೇಪರ್ ಸುತ್ತಿ, ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಕೊಲೆ ಬಳಿಕ ಬಿಹಾರಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಧೀರಜ್‌ನನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ವಿಚಾರಣೆ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Related Articles

Back to top button
error: Content is protected !!