ಆರ್ಥಿಕ

ಶೆಡ್‌ವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 2.98 ಕೋಟಿ ಹಣ ಪತ್ತೆ! 

Views: 75

ಕನ್ನಡ ಕರಾವಳಿ ಸುದ್ದಿ: ಶೆಡ್‌ವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ, ಯಾವುದೇ ದಾಖಲೆಗಳಿಲ್ಲದ, ಬರೋಬ್ಬರಿ 3 ಕೋಟಿ ರೂಪಾಯಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಣ ಪತ್ತೆಯಾಗಿದ್ದು ಬೆಂಗಳೂರಿನ ಕುರುಬರಹಳ್ಳಿಯಲ್ಲಿ.

ಪೊಲೀಸರು ಶೆಡ್‌ಗೆ ಹೋಗಿ ನೋಡಿದಾಗ ಅಲ್ಲಿರುವ ನಾಲ್ಕು ಬ್ಯಾಗ್‌ಗಳಲ್ಲಿ 2.98 ಕೋಟಿ ಹಣ ಇಡಲಾಗಿತ್ತು. ಇದನ್ನು ನೋಡಿ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಕೂಡಲೇ ಇನ್ಸ್‌ಪೆಕ್ಟ‌ರ್ ಹಾಗೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಅದೇ ರಾತ್ರಿ ವೇಳೆ ಹಣವನ್ನು ಎಣಿಸುವ ಕಾರ್ಯ ಪ್ರಾರಂಭವಾಗಿದೆ.

ನಂತರ ಐಟಿ ಇಲಾಖೆಗೆ ಮಾಹಿತಿ ನೀಡಿ, ಕೋರ್ಟ್ ಅನುಮತಿ ಪಡೆದು, KP Act 98 ಅಡಿ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿ, ಆರೋಪಿಗಳಾದ ನಾಗರಾಜ್ ಹಾಗೂ ವೆಂಕಟೇಶ ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳು ಹಣದ ಮೂಲದ ಬಗ್ಗೆ ಸರಿಯಾಗಿ ಮಾಹಿತಿ ನೀಡದೇ, ಬ್ಯಾಂಕಿಗೆ ಸಾಲದ ಹಣ ಕಟ್ಟಲು ಹಣ ತಂದಿದ್ದಾಗಿ ಹೇಳಿಕೆ ನೀಡಿದ್ದರು. ಸದ್ಯ ಜಾಮೀನು ಪಡೆದು ಬಿಡುಗಡೆಯಾಗಿದ್ದ ಆರೋಪಿಗಳಿಗೆ ಪೊಲೀಸರು ನೋಟಿಸ್‌ ನೀಡಿ ವಿಚಾರಣೆ ಮಾಡುತ್ತಿದ್ದಾರೆ.

 

Related Articles

Back to top button
error: Content is protected !!