ಸ್ಪೈಡರ್ ಮ್ಯಾನ್ ಖ್ಯಾತಿಯ ಕೋತಿರಾಜ್ ಅವರಿಗೆ ಕಂಕಣ ಭಾಗ್ಯ.. ಹುಡುಗಿ ಯಾರು ಗೊತ್ತಾ?
Views: 65
ಕನ್ನಡ ಕರಾವಳಿ ಸುದ್ದಿ: ಮಂಕಿಮ್ಯಾನ್ ಬಾಳಲ್ಲಿ ಬೆಳಕು ಮೂಡಿದೆ. ಖುಷಿಯ ವಿಚಾರ ಏನೆಂದರೆ ಜ್ಯೋತಿರಾಜ್ ಮದುವೆ ಫಿಕ್ಸ್ ಆಗಿದೆ. ಕಂಕಣ ಭಾಗ್ಯ ಕೂಡಿ ಬಂದಿದ್ದರಿಂದ ಕೋತಿ ರಾಜ್ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.
2019 ರಲ್ಲಿ ಜೋಗ ಜಲಪಾತದಲ್ಲಿ ಕಾಣೆಯಾದವರನ್ನು ಹುಡುಕಲು ಫಾಲ್ಸ್ಗೆ ಇಳಿದು ‘ಜ್ಯೋತಿ ರಾಜ್’ ಕೂಡ ಕಾಣೆಯಾಗಿದ್ದರಿಂದ ಮದುವೆ ಮುರಿದು ಬಿದ್ದಿತ್ತು. ಇದೀಗ ಆರೇಳು ವಸಂತಗಳ ಬಳಿಕ ಜ್ಯೋತಿರಾಜ್ ‘ನಿವೇದಿತಾ’ ಎಂಬವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ನಿವಾಸಿ ನಿವೇದಿತಾ ಜೊತೆ ಜ್ಯೋತಿರಾಜ್ ಅವರ ಮದುವೆ ನಿಶ್ಚಯವಾಗಿದೆ. ಪದವಿ ಪಡೆದಿರುವ ನಿವೇದಿತಾ ಕೋತಿರಾಜ್ ಅವರನ್ನು ವರಿಸಲಿದ್ದಾರೆ. ಆಗಸ್ಟ್ 22-23 ರಂದು ಚಿತ್ರದುರ್ಗದ ವೈಭವ ಗಾರ್ಡನ್ನಲ್ಲಿ ಮದುವೆಗೆ ಸಿದ್ಧತೆ ಆಗಿದೆ.
ಕೆಲ ವರ್ಷಗಳ ಹಿಂದೆ ಸಾಹಸ ವೃತ್ತಿಯಿಂದಾಗಿ ನಿಶ್ಚಯಗೊಂಡ ಮದುವೆ ಮುರಿದು ಬಿದ್ದಿತ್ತು. ಇದೀಗ ಜ್ಯೋತಿರಾಜ್ ಅವರ ಸಾಹಸವೃತ್ತಿಯನ್ನು ಒಪ್ಪಿ ನಿವೇದಿತಾ ಮದುವೆ ಆಗುತ್ತಿದ್ದಾರೆ. ಮದುವೆ ಬಳಿಕ ಎಚ್ಚರವಹಿಸಿ ಸಾಹಸವೃತ್ತಿ ಮುಂದುವರೆಸುತ್ತೇನೆ. ಕುಟುಂಬಸ್ಥರು ತಮಿಳುನಾಡಿನಲ್ಲಿ ಮದುವೆ ಆಗಲು ಒತ್ತಾಯಿಸಿದ್ದರು. ಆದರೆ, ನಾನು ಕನ್ನಡಿಗನಾಗಿ ದುರ್ಗದಲ್ಲೇ ಮದುವೆ ಆಗುವುದಾಗಿ ಜ್ಯೋತಿರಾಜ್ ಹೇಳಿದ್ದಾರೆ.






