ಧರ್ಮಸ್ಥಳ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ರೀತಿಯಲ್ಲಿ ವಿಡಿಯೋ: ಯೂಟ್ಯೂಬರ್ ಮೇಲೆ ಎಫ್‌ಐಆರ್!

Views: 267
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅವರ ಕೊಲೆ ಪ್ರಕರಣದ ವಿಚಾರ ಈಚೆಗೆ ಚರ್ಚೆಯ ಮುನ್ನೆಲೆಗೆ ಬಂದಿದ್ದು. ಸೌಜನ್ಯ ಅವರ ರೇಪ್ ಅಂಡ್ ಮರ್ಡರ್ ಕೇಸ್‌ಗೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಎನ್ನುವವರು ಸುದೀರ್ಘ ವಿಡಿಯೋವೊಂದನ್ನು ಮಾಡಿದ್ದರು. ಇದೀಗ ಸಮೀರ್ ಅವರ ವಿರುದ್ಧ ಬಳ್ಳಾರಿ ಜಿಲ್ಲೆಯ ಕೌಲ್‌ಬಝಾರ್ ಪೊಲೀಸ್ ಠಾಣೆಯ ಪೊಲೀಸರು ಇದೀಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಸಮೀರ್ ಅವರ ವಿಡಿಯೋವನ್ನು ಒಂದು ಕೋಟಿಗೂ ಹೆಚ್ಚು ಜನ ನೋಡಿದ್ದು. ಇದೀಗ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಧರ್ಮಸ್ಥಳ ಹಾಗೂ ಧಾರ್ಮಿಕ ಭಾವನೆ, ಸಾರ್ವಜನಿಕರ ಧಾರ್ಮಿಕ ಭಾವನೆಗೆ ಧಕ್ಕೆ ಆಗುವ ರೀತಿಯಲ್ಲಿ ವಿಡಿಯೋ ಮಾಡಿರುವ ಆರೋಪ ಕೇಳಿ ಬಂದಿದ್ದು. ಈ ಅಂಶಗಳನ್ನು ಸಮೀರ್ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸ್‌ನ ಬಗ್ಗೆ ಯೂಟ್ಯೂಬರ್ ಸಮೀರ್ ಮಾಡಿದ್ದ ವೀಡಿಯೋ ಕರ್ನಾಟಕದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ.ಆತನ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದ್ದು. ಪೊಲೀಸರು ಬಂಧಿಸುವುದಕ್ಕೆ ಮುಂದಾಗಿದ್ದರು ಎನ್ನಲಾಗಿದೆ.
ಆದರೆ ಸಮೀರ್ ಅವರು ವಿಚಾರಣೆಗೆ ಸಹಕರಿಸುವುದಾಗಿ ಒಪ್ಪಿಕೊಂಡ ಮೇಲೆ ಪೊಲೀಸರು ಹಿಂದಿರುಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಲೈವ್‌ನಲ್ಲಿ ಸಮೀರ್ ಅವರು ಮಾಹಿತಿ ಹಂಚಿಕೊಂಡಿದ್ದರು. ಬುಧವಾರ ಪೊಲೀಸರಿಂದ ನೋಟಿಸ್ ಬಂದಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಅಲ್ಲದೆ ಮುಂದುವರಿದು ನನಗೆ ಯಾವುದೇ ಭಯವಿಲ್ಲ. ಸೌಜನ್ಯ ಪ್ರಕರಣದ ಬಗ್ಗೆ ಮಾಡಿರುವ ವೀಡಿಯೋಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಇರಿಸಿಕೊಂಡೇ ವಿಡಿಯೋ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಆದರೆ, ಈ ವಿಚಾರದ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.