ಧಾರ್ಮಿಕ

ಫೆ.14,15 ಕಾಳಾವರ ಹೊಸೂರು ಶ್ರೀ ಸಣ್ಣಮ್ಮ ಸಪರಿವಾರ ದೈವಸ್ಥಾನ:ಹಾಲು ಹಬ್ಬ, ಗೆಂಡ ಸೇವೆ, ಢಕ್ಕೆಬಲಿ

Views: 62

ಕನ್ನಡ ಕರಾವಳಿ ಸುದ್ದಿ 

ಭಗವದ್ಭಕ್ತರೇ,

ಸ್ವಸ್ತಿ! ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸ ದಿನ ೧ ಸಲುವ ಮಾಘ ಕೃಷ್ಣ ೧೨ ಯು ದಿನಾಂಕ: 14-02-2026ನೇ  ಶನಿವಾರದಿಂದ ಆರಂಭಿಸಿ ದಿನಾಂಕ : 15-02-2026ನೇ ಆದಿತ್ಯವಾರ ಪರ್ಯಂತ ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಹೊಸೂರು ಸಣ್ಣಮ್ಮ ಸಪರಿವಾರ ದೈವಸ್ಥಾನದ ದಿವ್ಯ ಸನ್ನಿಧಿಯಲ್ಲಿ

ಹಾಲು ಹಬ್ಬ, ಗಂಡಸೇವೆ, ಢಕ್ಕೆಬಲಿ ತುಲಾಭಾರ ಸೇವೆ

 ಧಾರ್ಮಿಕ ಕಾರ್ಯಕ್ರಮಗಳು

ದಿನಾಂಕ : 14-02-2026 ಶನಿವಾರ ಸಂಜೆ ಗಂಟೆ 5-30ಕ್ಕೆ ಸಾಮೂಹಿಕ ಪ್ರಾರ್ಥನೆ, ನಾಗನಿಗೆ ಹಾಲಿಟ್ಟು ಸೇವೆ, ಬ್ರಹ್ಮಮಂಡಲ, ಮಹಾಪೂಜೆ, ದೇವಿಯ ದರ್ಶನ, ಗೆಂಡಸೇವೆ, ಮಹಾಪ್ರಸಾದ ವಿತರಣೆ—ಸಾಮೂಹಿಕ ಅನ್ನಸಂತರ್ಪಣೆ

ರಾತ್ರಿ ಗಂಟೆ 8-00 ಗೆಂಡ ಸೇವೆ

ದಿನಾಂಕ : 15-02-2026 ಆದಿತ್ಯವಾರ ಬೆಳಿಗ್ಗೆ 7-00 ರಿಂದ– ಢಕ್ಕೆಬಲಿ

ಭಕ್ತಾದಿಗಳಿಂದ ಫಲಪುಷ್ಪ ಸಮರ್ಪಣೆ, ತುಲಾಭಾರ ಸೇವೆ, ಪ್ರಸಾದ ವಿತರಣೆ–ಸಾಮೂಹಿಕ ಅನ್ನಸಂತರ್ಪಣೆ

ಶ್ರೀ ದೇವರ ಇಚ್ಛೆ ಹಾಗೂ ಸಕಲ ಜನರ ಪ್ರೋತ್ಸಾಹದಿಂದಲೇ ನಡೆಯುವ ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಆಗಮಿಸಿ, ತನು-ಮನ-ಧನ ಸಹಾಯವನ್ನು ಕೊಟ್ಟು, ನಮ್ಮನ್ನು ಪ್ರೋತ್ಸಾಹಿಸಿ, ಶ್ರೀ ದೇವಿಯ ಪವಿತ್ರ ಪ್ರಸಾದವನ್ನು ಸ್ವೀಕರಿಸಿ, ಸಪರಿವಾರ ಸಣ್ಣಮ್ಮ ದೇವಿಯ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,

ಅರ್ಚಕರು,ಮೊಕ್ತೇಸರರು, ಪಾತ್ರಿಗಳು,ಆಡಳಿತ ಮಂಡಳಿ ಹಾಗೂ ಊರಿನ ಹತ್ತು ಸಮಸ್ತರು ಮತ್ತು ನಂಬಿದ ಸಕಲ ಭಕ್ತ ಮಹಾಶಯರು

Related Articles

Back to top button
error: Content is protected !!