ಉಡುಪಿ: ಹರಿಕಥಾ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ, ಕಲಾವಿದರು ಕ್ಷಮಾಪಣೆ
Views: 56
ಕನ್ನಡ ಕರಾವಳಿ ಸುದ್ದಿ,: ರಾಜಾಂಗಣದಲ್ಲಿ ಕಾರ್ಯಕ್ರಮ ನಡೆಸುವ ಸಲುವಾಗಿ ಇವರು ಮಠದ ಅನುಮತಿ ಪಡೆದು ಭಕ್ತ ಪ್ರಹ್ಲಾದ ಎಂಬ ಹರಿಕಥಾ ಕಾರ್ಯಕ್ರಮವನ್ನು ನಡೆಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೊ ವೈರಲ್ ಆದ ಬೆನ್ನಲ್ಲೆ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು ಗಮನಕ್ಕೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ಅಂಕಿತ ನಾಯ್ಕ ಮತ್ತು ಗೌರಿ ಪಾಂಡುರಂಗಿ ಸಾರ್ವಜನಿಕವಾಗಿ ಕ್ಷಮಾಪಣೆಯನ್ನು ಕೇಳಲು ಮಠದಿಂದ ಸೂಚಿಸಲಾಗಿದ್ದು, ಇದೀಗ ವೀಡಿಯೋ ಮೂಲಕ ಕ್ಷಮೆ ಯಾಚಿಸಿದ್ದಾರೆ.
ಯಾರನ್ನೂ ನಿಂದನೆ ಮಾಡುವ ಉದ್ದೇಶ ನಮಗೆ ಇರಲಿಲ್ಲ, ಯಾವ ಮಧ್ವ ಮಠದವರೂ ನಮಗೆ ಇದನ್ನು ಹೇಳಿಕೊಟ್ಟಿಲ್ಲ. ಪುಸ್ತಕವನ್ನು ರೆಫರ್ ಮಾಡಿ ನಾವು ಓದಿದ್ದೆವು. ನಮ್ಮಿಂದ ಬೇರೆ ಮತದವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ. ಉಡುಪಿ ಮಠ ಅಥವಾ ಶಿರೂರು ಮಠಕ್ಕೂ ನಮ್ಮ ಮಾತಿಗೂ ಸಂಬಂಧವಿಲ್ಲ . ಮಠದವರಿಗೆ ತೊಂದರೆಯಾಗಿದ್ದರೆ ನಾವು ಕ್ಷಮೆಯನ್ನು ಕೇಳುತ್ತೇವೆ ಎಂದು ವಿಡಿಯೋ ಮೂಲಕ ಕಮೆಯಾಚಿಸಿದ್ದಾರೆ.
ಯಾರನ್ನೂ ನಿಂದನೆ ಮಾಡುವ ಉದ್ದೇಶ ನಮಗೆ ಇರಲಿಲ್ಲ, ಯಾವ ಮಧ್ವ ಮಠದವರೂ ನಮಗೆ ಇದನ್ನು ಹೇಳಿಕೊಟ್ಟಿಲ್ಲ. ಪುಸ್ತಕವನ್ನು ರೆಫರ್ ಮಾಡಿ ನಾವು ಓದಿದ್ದೆವು. ನಮ್ಮಿಂದ ಬೇರೆ ಮತದವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ. ಉಡುಪಿ ಮಠ ಅಥವಾ ಶಿರೂರು ಮಠಕ್ಕೂ ನಮ್ಮ ಮಾತಿಗೂ ಸಂಬಂಧವಿಲ್ಲ . ಮಠದವರಿಗೆ ತೊಂದರೆಯಾಗಿದ್ದರೆ ನಾವು ಕ್ಷಮೆಯನ್ನು ಕೇಳುತ್ತೇವೆ ಎಂದು ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ.






