ಇತರೆ

ತಾಯಿಗೆ ಮದುವೆ ನಿಶ್ಚಯ: ತಲೆಯನ್ನೇ ಬೋಳಿಸಿಕೊಂಡ ಯುವತಿ

Views: 164

ಕನ್ನಡ ಕರಾವಳಿ ಸುದ್ದಿ: ತಾಯಿ ಮದುವೆ ಪ್ಲ್ಯಾನ್‌ ಮಾಡಿದ್ದಾರೆ  ಎಂಬ ಕಾರಣಕ್ಕೆ ಯುವತಿಯೊಬ್ಬಳು ತನ್ನ ತಲೆಯನ್ನು ಪೂರ್ತಿಯಾಗಿ ಬೋಳಿಸಿಕೊಂಡಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಕೀರ್ತನಾ ಮೆನನ್ ಎಂಬ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು “ತಾಯಿ ನನ್ನ ಮದುವೆಯ ಪ್ಲ್ಯಾನ್‌ ಮಾಡಿದ್ದಾರೆ” ಎಂಬ ಶೀರ್ಷಿಕೆ ನೀಡಿದ್ದಾಳೆ. ತಾಯಿ ಮದುವೆ ನಿಗದಿ ಮಾಡಿದರು ಎಂಬ ಕಾರಣಕ್ಕೆ ಪ್ರತಿಭಟನೆಯ ರೂಪದಲ್ಲಿ ಬೇಸತ್ತು ತಲೆಯನ್ನು ಬೋಳಿಸಿಕೊಂಡಿರುವುದಾಗಿ ತಿಳಿಸಿದ್ದಾಳೆ.

ಭಾರತೀಯ ಹೆಚ್ಚಿನ ಕುಟುಂಬಗಳಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ವಯಸ್ಸು ಬಂತು ಎಂದಾಗ ಹುಡುಗನ ಹುಡುಕಾಟದಲ್ಲಿ ತೊಡಗುತ್ತಾರೆ. ಆದರೆ ಆಧುನಿಕ ಯುಗದ ಮಹಿಳೆಯರು ತಾವು ಸ್ವತಂತ್ರವಾಗಿ ಬದುಕಲು ಇಚ್ಚಿಸುತ್ತಾರೆ. ಇಲ್ಲೂ ಕೂಡ ಯುವತಿ ಈಗಲೇ ಮದುವೆ ಬೇಡ ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾಳೆ.

ಪೂರ್ತಿ ಕೂದಲನ್ನು ಕತ್ತರಿದರೂ ಆಕೆ ಯಾವುದೇ ಬೇಸರವಿಲ್ಲದೆ ನಗುತ್ತಾ ಕುಳಿತಿದ್ದಾಳೆ. ಮದುವೆಯನ್ನು ನಿಗದಿ ಪಡಿಸಿರುವುದನ್ನು ವಿರೋಧಿಸಿ ತಲೆ ಬೋಳಿಸಿರುವ ಈ ವಿಡಿಯೊ ಅನೇಕ ನೆಟ್ಟಿಗರ ಗಮನ ಸೆಳೆದಿದೆ. ಒಬ್ಬರು, “ಮಾಡರ್ನ್ ಸಮಸ್ಯೆಗಳಿಗೆ ಇದೇ ಪರಿಹಾರ” ಎಂದಿದ್ದಾರೆ. ಮತ್ತೊಬ್ಬರು, ʼʼಉತ್ತಮ ನಿರ್ಧಾರ. ನೀವು ಜೀವನದಲ್ಲಿ ದೊಡ್ಡ ಪ್ಲ್ಯಾನ್‌ ಮಾಡುತ್ತೀರಿ ಮತ್ತು ನೀವು ಅದನ್ನು ತಲುಪುತ್ತೀರಿʼʼ ಎಂದು ಬರೆದುಕೊಂಡಿದ್ದಾರೆ.

Related Articles

Back to top button
error: Content is protected !!