ಪತಿಯ ಬಂಧನ ತಡೆಯಲು ಯತ್ನಿಸಿದ ವೇಳೆ ಗರ್ಭಿಣಿಯ ಹೊಟ್ಟೆಗೆ ಪೋಲಿಸರಿಂದ ಒದೆತ ಮಹಿಳೆ ಸಾವು
Views: 9
ಕನ್ನಡ ಕರಾವಳಿ ಸುದ್ದಿ: ಕಳ್ಳತನದ ಶಂಕೆಯಲ್ಲಿ ತನ್ನ ಪತಿಯ ಬಂಧನವನ್ನು ತಡೆಯಲು ಪ್ರಯತ್ನಿಸಿದ್ದ ಗರ್ಭಿಣಿಯ ಹೊಟ್ಟೆಗೆ ಪೋಲಿಸರು ಒದ್ದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಫಿರೋಝಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ನಡೆದಿದೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವ್ ಎಂಬಾತನನ್ನು ಬಂಧಿಸಲು ಆತನ ಮನೆಗೆ ತೆರಳಿತ್ತು. ಪತಿಯನ್ನು ಕರೆದೊಯ್ಯದಂತೆ ಬೇಡಿಕೊಂಡ ಅಂಜಲಿ (28) ಹೊಟ್ಟೆಗೆ ಧರಮ್‌ಪಾಲ್ ಸಿಂಗ್ ಒದ್ದಿದ್ದರಿಂದ ಮಹಿಳೆ ಕುಸಿದು ಬಿದ್ದಿದ್ದಾರೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ.
ಗೌರವನನ್ನು ಪೋಲಿಸರು ಬಂಧಿಸಿ ಕರೆದೊಯ್ದ ಬಳಿಕ ಅಂಜಲಿಯ ಸ್ಥಿತಿ ಹದಗೆಟ್ಟಿದ್ದು ಆಕೆಯನ್ನು ಶಿಕೋಹಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸೋಮವಾರ ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಅಂಜಲಿಯ ಸ್ಥಿತಿ ಇನ್ನಷ್ಟು ಗಂಭೀರಗೊಂಡಿದ್ದು, ಫಿರೋಝಾಬಾದ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ನವಜಾತ ಶಿಶುವಿನ ಸ್ಥಿತಿಯೂ ಗಂಭೀರವಾಗಿದ್ದು, ಆಗ್ರಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಇಬ್ಬರು ಉಪನಿರೀಕ್ಷಕರು ಸೇರಿದಂತೆ ಒಟ್ಟು ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.






