ಸಾಂಸ್ಕೃತಿಕ

ಬಿಗ್‌ಬಾಸ್‌ ಮನೆಯಿಂದ ಎಲಿಮಿನೆಟ್.? ಫಿನಾಲೆ ಕನಸು ಕಂಡಿದ್ದ ಚೈತ್ರಾ ಕುಂದಾಪುರಗೆ ಬಿಗ್‌ ಶಾಕ್!

Views: 214

ಕನ್ನಡ ಕರಾವಳಿ ಸುದ್ದಿ:ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಪ್ರೇಕ್ಷಕರ ಮನ ಗೆದ್ದು ಮುನ್ನುಗುತ್ತಿದೆ. ಬಿಗ್‌ಬಾಸ್‌ ಮನೆಯಲ್ಲಿ ಒಟ್ಟು 9 ಸ್ಪರ್ಧಿಗಳು ಉಳಿದುಕೊಂಡಿದ್ದು, ಈ ವಾರ ಬಿಗ್‌ಬಾಸ್‌ ಮನೆಯಿಂದ ಆಚೆ ಹೋಗಲು 5 ಸ್ಪರ್ಧಿಗಳು ನಾಮಿನೇಟ್‌‌ ಆಗಿದ್ದಾರೆ.

ತ್ರಿವಿಕ್ರಮ್‌, ಮೋಕ್ಷಿತಾ ಪೈ, ಭವ್ಯಾ ಗೌಡ, ಚೈತ್ರಾ ಕುಂದಾಪುರ ಹಾಗೂ ಧನರಾಜ್‌ ಆಚಾರ್‌ ನಾಮಿನೇಷನ್ ಬಿಸಿಯಲ್ಲಿದ್ದಾರೆ. ಈ ಐದು ಮಂದಿಯಲ್ಲಿ ಈ ವಾರ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ನಾಮಿನೇಷನ್‌ನಲ್ಲಿ ಸ್ಟ್ರಾಂಗ್ ಸ್ಪರ್ಧಿಗಳೇ ಇರುವುದರಿಂದ ಈ ವಾರ ಔಟ್ ಆಗೋರು ಯಾರು ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.

ಎಪಿಸೋಡ್ನಲ್ಲಿ ಭವ್ಯಾ ಗೌಡ ಸೇಫ್ ಆಗಿದ್ದರು. ಸದ್ಯ 4 ಸ್ಪರ್ಧಿಗಳು ನಾಮಿನೇಷನ್ ಹಾಟ್ ಸೀಟ್ನಲ್ಲಿ ಇದ್ದಾರೆ. ಎರಡು ವಾರದಲ್ಲಿ 4 ಸ್ಪರ್ಧಿಗಳು ಬಿಗ್ಬಾಸ್ ಮನೆಯಿಂದ ಆಚೆ ಹೋಗಲಿದ್ದಾರೆ. ಆಗ 5 ಸ್ಪರ್ಧಿಗಳು ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡಲಿದ್ದಾರೆ. ಬಿಗ್‌ಬಾಸ್‌‌ ಫಿನಾಲೆ ಕನಸು ಕಂಡಿದ್ದ ಚೈತ್ರಾಗೆ ಬಿಗ್‌ ಶಾಕ್‌ ಎದುರಾಗಿದ್ದು, ಮೂಲಗಳ ಪ್ರಕಾರ ಈ ವಾರ ಬಿಗ್‌ಬಾಸ್‌ ಮನೆಯಿಂದ ಚೈತ್ರಾ ಕುಂದಾಪುರ ಬರೊದು ಗ್ಯಾರಂಟಿ ಎನ್ನಲಾಗಿದೆ.ಬಿಗ್‌ ಬಾಸ್‌ ಮನೆಯಿಂದ ಈ ವಾರ ಚೈತ್ರಾ ಕುಂದಾಪುರ ಎಲಿಮಿನೆಟ್‌ ಆಗಲಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿದ್ದಾರೆ. ಕೊನೆಯ ಗಳಿಗೆಯಲ್ಲಿ ಭಾಷಣ ಮಾಡಿದ ಅವರು, ಮನೆಯಲ್ಲಿ ಕಳಪೆ ಆಟವಾಡಿದ್ದರೂ ಉತ್ತಮ ಎನಿಸಿಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರೆ. ಕ್ಯಾಪ್ಟನ್ ಆಗಲು ಆಗದ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

Related Articles

Back to top button
error: Content is protected !!