60ನೇ ವಯಸ್ಸಿಗೆ ಸ್ಟಾರ್ ನಟಿ ಸುಹಾಸಿನಿ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿ ಮದುವೆ!
Views: 298
ಕನ್ನಡ ಕರಾವಳಿ ಸುದ್ದಿ:ಸುಹಾಸಿನಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಮದುವೆ ವಿಚಾರದಿಂದ ಸುದ್ದಿಯಾಗಿದ್ದಾರೆ. ಅವರು ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.ವಯಸ್ಸು ಕೇವಲ ಒಂದು ಸಂಖ್ಯೆ’ ಎಂಬ ಮಾತನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ ಖ್ಯಾತ ನಟಿ ಸುಹಾಸಿನಿ ಇದು ನಿಜವೆಂದು ಸಾಬೀತುಪಡಿಸಿದ್ದಾರೆ. ‘ಲಗಾನ್’ ಚಿತ್ರದಲ್ಲಿ ಅಮೀರ್ ಖಾನ್ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದ ನಟಿ ಸುಹಾಸಿನಿ ಮುಲೆ ಚಿತ್ರರಂಗದ ಹಿರಿಯ ನಟಿ. ಸುಹಾಸಿನಿ ಮುಲೆ 60 ವರ್ಷ ವಯಸ್ಸಿನಲ್ಲಿ ಮದುವೆಯಾದರು. ಸುಹಾಸಿನಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಇದೇ ವಿಚಾರದಿಂದ ಸುದ್ದಿಯಾಗಿದ್ದಾರೆ. ಸುಹಾಸಿನಿ ಮುಲೆ ಬಾಲಿವುಡ್ ಮತ್ತು ಮರಾಠಿಯ ಶ್ರೇಷ್ಠ ನಟಿ. ಅವರು ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.ಈ ನಟಿ 60 ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದರು. ಬಳಿಕ ಮದುವೆ ಆದರು. ಆದರೆ ಮದುವೆಯ ಬಗ್ಗೆ 4 ವರ್ಷಗಳ ಕಾಲ ಯಾರಿಗೂ ಹೇಳಲಿಲ್ಲ. ಸುಹಾಸಿನಿ ಮುಲೆ ಹಲವು ಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮದೇ ಆದ ಇಮೇಜ್ ರಚಿಸಿದ್ದಾರೆ. ನಟಿ ‘ದಿಲ್ ಚಾಹ್ತಾ ಹೈ’, ‘ಜೋಧಾ ಅಕ್ಬರ್’ ಮತ್ತು ‘ಹೋ-ತು-ತು’ ಸಿನಿಮಾಗಳಿಗಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.
ಸುಹಾಸಿನಿ ಮುಲೆ ಅವರು ತಮ್ಮ ಮದುವೆ ಸುದ್ದಿಯಿಂದಲೇ ಹೆಚ್ಚು ಚರ್ಚೆಗೀಡಾದರು. ಸುಹಾಸಿನಿ ಅವರು 4 ವರ್ಷಗಳ ಬಳಿಕ ತಮ್ಮ ಮದುವೆ ಬಗ್ಗೆ ತಿಳಿಸಿದ್ದರು. ಭೌತಶಾಸ್ತ್ರ ಪ್ರಾಧ್ಯಾಪಕ ಅತುಲ್ ಗುರ್ತು ಅವರನ್ನು 60 ನೇ ವಯಸ್ಸಿನಲ್ಲಿ ಸುಹಾಸಿನಿ ವಿವಾಹವಾದರು ಎಂದು ಹೇಳಿದ್ದರು.
ಸುಹಾಸಿನಿ ಮತ್ತು ಅತುಲ್ ಫೇಸ್‌ಬುಕ್‌ನಲ್ಲಿ ಸ್ನೇಹಿತರಾದರು. ಬಳಿಕ ಒಬ್ಬರಿಗೊಬ್ಬರು ಮಾತನಾಡಲು ಪ್ರಾರಂಭಿಸಿದರು. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡರು ಮತ್ತು ಇಬ್ಬರೂ ಮದುವೆ ಆಗಲು ನಿರ್ಧರಿಸಿದರು. ಇವರು ಮೊದಲು ಕೋರ್ಟ್ ಮ್ಯಾರೇಜ್ ಆದರು. ನಂತರ ಆರ್ಯ ಸಮಾಜದ ಸಂಪ್ರದಾಯದಂತೆ ವಿವಾಹವಾದರು.
ವರದಿ ಪ್ರಕಾರ, ಸುಹಾಸಿನಿ ಅವರ ಅತುಲ್ ಅವರಿಗೂ ಮುನ್ನ 90 ರ ದಶಕದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದರು ಎನ್ನಲಾಗುತ್ತದೆ. ಈ ಸಂಬಂಧವು ವರ್ಕ್ ಔಟ್ ಆಗಲಿಲ್ಲ. ಪ್ರೇಮಿಯಿಂದ ಬೇರ್ಪಟ್ಟ ನಂತರ ನಟಿ ಒಂಟಿಯಾಗಿದ್ದರು. ಇದು ಅತುಲ್ ಅವರ ಎರಡನೇ ಮದುವೆಯಾಗಿದ್ದು, ಅವರ ಮೊದಲ ಪತ್ನಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು.