ಕೃಷಿ

ಉಡುಪಿ: ಬೆಂಬಲ ಬೆಲೆ ಯೋಜನೆಯಡಿ ರೈತರ ಭತ್ತ ಖರೀದಿ

Views: 150

ಉಡುಪಿ: ಕೇಂದ್ರ ಸರಕಾರವು ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತಕ್ಕೆ ಸಾಮಾನ್ಯ ದರ 2,300 ರೂ. ಹಾಗೂ ಗ್ರೇಡ್‌ “ಎ’ ಭತ್ತಕ್ಕೆ ದರ 2,320 ರೂ.ಗಳನ್ನು ನಿಗದಿಪಡಿಸಿದೆ.

ಜಿಲ್ಲೆಯ ರೈತರಿಂದ ಭತ್ತವನ್ನು ನಿಯಮಾನುಸಾರ ಖರೀದಿಸಲು ನೋಂದಣಿ ಕೇಂದ್ರಗಳನ್ನು ತೆರೆದು ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿದೆ.

ಭತ್ತವನ್ನು ಖರೀದಿಸಲು ಕರ್ನಾಟಕ ಆಹಾರ ನಿಗಮವನ್ನು ಏಜೆನ್ಸಿಯಾಗಿ ನೇಮಿಸಲಾಗಿದೆ. ಖರೀದಿ ಏಜೆನ್ಸಿಯಿಂದ ನ.15ರಿಂದ ಡಿ. 31ರ ವರೆಗೆ ರೈತರಿಂದ ಭತ್ತದ ನೋಂದಣಿ ಪ್ರಕ್ರಿಯೆ ಹಾಗೂ 2025ರ ಜ.1ರಿಂದ ಮಾ.31ರೊಳಗೆ ಭತ್ತ ಖರೀದಿಸುವ ಪ್ರಕ್ರಿಯೆ ನಡೆಯಲಿದೆ.

ಉಡುಪಿ ಎಪಿಎಂಸಿ ಯಾರ್ಡ್‌ನ ಕೆಎಫ್‌ಸಿಎಸ್‌ಸಿ ಗೋದಾಮು, ಕುಂದಾಪುರ ಕೋಟೇಶ್ವರದ ಕೆಎಫ್‌ಸಿಎಸ್‌ಸಿ ಗೋದಾಮು, ಕಾರ್ಕಳ ಎಪಿಎಂಸಿ ಯಾರ್ಡ್‌ನ ಕೆಎಫ್‌ಸಿಎಸ್‌ಸಿ ಗೋದಾಮಿನಲ್ಲಿ ಭತ್ತದ ನೋಂದಣಿ/ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.

ಭತ್ತ ಬೆಳೆದಿರುವ ರೈತರು ಕೃಷಿ ಇಲಾಖೆಯ ಫ್ರೂಟ್ಸ್‌ ತಂತ್ರಾಂಶದಲ್ಲಿ ಸೇರ್ಪಡೆ ಮಾಡಿಕೊಂಡು, ಅನಂತರ ತಂತ್ರಾಂಶದ ಗುರುತಿನ ಸಂಖ್ಯೆ, ಆಧಾರ್‌ ಜೋಡಣೆಯಾದ ಬ್ಯಾಂಕ್‌ ಖಾತೆ ಮಾಹಿತಿಯೊಂದಿಗೆ ನೋಂದಣಿ ಕೇಂದ್ರದಲ್ಲಿ ನೋಂದಣಿಸಿಕೊಳ್ಳಬಹುದು.ರೈತರು ಈ ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Related Articles

Back to top button