ಯುವಜನ

ಬ್ರಹ್ಮಾವರ:8ನೇ ತರಗತಿ ವಿದ್ಯಾರ್ಥಿ ಹಾಸ್ಟೆಲ್‌ ನಲ್ಲಿ ನೇಣುಬಿಗಿದು ಆತ್ಮಹತ್ಯೆ, ಸಾವಿನ ಬಗ್ಗೆ ಅನುಮಾನ!

Views: 196

ಬ್ರಹ್ಮಾವರ : ಹೇರಾಡಿಯ ಖಾಸಗಿ ಶಾಲೆಯ ವಿದ್ಯಾರ್ಥಿಯೊಬ್ಬ ಮದರಸ ಹಾಸ್ಟೆಲ್‌ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಯು ರಿಹಾನ ಬೇಗಂ ಎಂಬವರ ಪುತ್ರ ಮೊಹಮ್ಮದ್‌ ಜಹೀದ (12) ಎಂದು ಗುರುತಿಸಲಾಗಿದೆ.

ಈತ ಕಳೆದ 4 ತಿಂಗಳಿನಿಂದ ಬ್ರಹ್ಮಾವರ ತಾಲೂಕಿನ ರಂಗನಕೇರಿಯ ಮದರಸದ ಹಾಸ್ಟೆಲ್‌ ನಲ್ಲಿ ಉಳಿದುಕೊಂಡು ಹೇರಾಡಿ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾನೆ.

ರಜೆಯಲ್ಲಿ ಮನೆಗೆ ಹೋಗಿದ್ದ ಜಹೀದ್ ರಜೆ ಮುಗಿಸಿ ಅ.11ರಂದು ಮದರಸದ ಹಾಸ್ಟೆಲ್‌ಗೆ ಹೋಗಿದ್ದನು ಎನ್ನಲಾಗಿದೆ.

ಅ.12ರಂದು ರಾತ್ರಿ ವೇಳೆ ಜಹೀದ್ ಮದರಸ ಹಾಸ್ಟೆಲ್ ಬಾತ್‌ರೂಮಿನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಮಗನ ಸಾವಿನಲ್ಲಿ ಸಂಶಯವಿರುವುದಾಗಿ ತಾಯಿ ರಿಹಾನ ಬೇಗಂ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Related Articles

Back to top button
error: Content is protected !!