ಕೃಷಿ

ಇಂದು ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಹಣ ಬಿಡುಗಡೆ 

Views: 191

ನವದೆಹಲಿ: ದೇಶಾದ್ಯಂತ ಸುಮಾರು 9.5 ಕೋಟಿ ರೈತರಿಗೆ ಶನಿವಾರ (ಅ.5) ಕೇಂದ್ರ ಸರ್ಕಾರದಿಂದ ನವರಾತ್ರಿ ಕೊಡುಗೆ ಸಿಗಲಿದೆ. ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ಯ (ಪಿಎಂ-ಕಿಸಾನ್‌) 18ನೇ ಕಂತನ್ನು ಪ್ರಧಾನಿ ಮೋದಿ ಅವರು ಶನಿವಾರ ಬಿಡುಗಡೆ ಮಾಡಲಿದ್ದಾರೆ.

ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ತಲಾ 2 ಸಾವಿರ ರೂ. ನೇರವಾಗಿ ಜಮೆಯಾಗಲಿದೆ. ಈ ಕಂತಿನಲ್ಲಿ ಟ್ಟು 20,000 ಕೋಟಿ ರೂ.ಗಳನ್ನು ಸರ್ಕಾರ ರೈತರಿಗೆ ಪಾವತಿಸಲಿದೆ.

2018 ರಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ ಆರಂಭಿಸಲಾಯಿತು. ಈ ಯೋಜನೆ ಅಡಿಯಲ್ಲಿ ಅರ್ಹ ರೈತರು 3 ಕಂತುಗಳಲ್ಲಿ ತಲಾ 2,000 ರೂ.ಗಳಂತೆ ವಾರ್ಷಿಕ ಒಟ್ಟು 6,000 ರೂ.ಗಳನ್ನು ಪಡೆಯುತ್ತಾರೆ. ಈ ಮೊತ್ತವು ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ.

Related Articles

Back to top button