ಸಾಧನೆಯ ಶಿಖರವೇರಿದ ಅಸಾದಾರಣ ಬಾಲ ಪ್ರತಿಭೆ “ಮೋಕ್ಷಿತ್”

Views: 371
ಮಂಗಳೂರು: ಕಾಟಿಪಳ್ಳ ದಿ.ಕೃಷ್ಣ ಶೆಟ್ಟಿಗಾರರ ಮೊಮ್ಮಗ, ಶ್ರೀಮತಿ ಉಷಾಕುಮಾರಿ ಮತ್ತು ಶ್ರೀ ಸುರೇಶ ಶೆಟ್ಟಿಗಾರ್ ರವರ ಪುತ್ರ ಚಿ.ಮೋಕ್ಷಿತ್ PUCಯ PCMB ಯಲ್ಲಿ ಶೇ97 ಅಂಕಗಳೊಂದಿಗೂ, JEE MAIN ಪರೀಕ್ಷೆಯಲ್ಲಿ ಶೇ 95 ಅಂಕಗಳಿಸಿ ಉತ್ತೀರ್ಣನಾಗಿ ಕೀರ್ತಿ ತಂದಿರುತ್ತಾನೆ.
ತಂದೆ ಚಿತ್ರಕಲಾ ಶಿಕ್ಷಕರಾಗಿ ಉದ್ಯೋಗ ಆರಂಭಿಸಿ, ನಂತರ ಕಾಟಿಪಳ್ಳದಲ್ಲೇ ಚಿತ್ರಕಲಾ ಕೇಂದ್ರ ಸ್ಥಾಪಿಸಿ ದುಡಿಯುತ್ತಿದ್ದಾರೆ.ತಾಯಿ MRPL ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಶವಾಹಿನಿಯ ಕೆಲಸ ಮೋಕ್ಷಿತ್ ನಲ್ಲಿ ಪರಿಣಾಮ ಬೀರಿದ್ದು, ಈತ ತನ್ನ ಎರಡೂವರೆ ವರ್ಷದಲ್ಲೇ ಜಲವರ್ಣ ಕಲೆಯನ್ನು ಕಲಿಯಲಾರಂಭಿಸಿ ಚಿತ್ರಕಲೆಯಲ್ಲಿ ಹೆಜ್ಜೆಗರುತು ಮೂಡಿಸಿರುವದನ್ನು ಗಮನಿಸಬಹುದು.
ಪದವಿ ಪೂರ್ವ ಶಿಕ್ಷಣ ಪೂರೈಸುವ ವೇಳೆ 200 ಕ್ಕೂ ಹೆಚ್ಚು ಪಾರಿತೋಷಕ ಮತ್ತು ಬಹುಮಾನವನ್ನು ಚಿತ್ರಕಲೆಯಲ್ಲಿ ಗಳಿಸಿರುವುದಾಗಿ ತಿಳಿದುಬಂದಿದೆ.
ಮೋಕ್ಷಿತ್ ಸಾಧನೆಯ ಕಿರುನೋಟ
ಡ್ರಾಯಿಂಗ್ ಹೈಯರ್ ಗ್ರೇಡ ಪರೀಕ್ಷೆಯಲ್ಲಿ ರಾಜ್ಯಕ್ಕೆ 10 ರೊಳಗಿನ ಸ್ಥಾನ ಪಡೆದು ವಿಶೇಷ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾನೆ.
ಕನ್ನಡ ರಾಜ್ಯೋತ್ಸವ ದ ದಕ್ಷಿಣ ಕನ್ನಡ ಜಿಲ್ಲಾ ಪ್ರಶಸ್ತಿಯಲ್ಲಿ “ಅಸಾದಾರಣ ಬಾಲ ಪ್ರತಿಭಾ ಪುರಸ್ಕಾರ 2017 ”
ಬೆಂಗಳೂರಿನ ಜ್ಞಾನಮಂದಿರ ಏಜುಕೇಶನಲ್ ಮತ್ತು ಕಲ್ಚರಲ್ಅಕಾಡೆಮಿ ಇವರಿಂದ “ಕರ್ನಾಟಕ ಕಲಾಶ್ರೀ” ಪ್ರಶಸ್ತಿ.
ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ ವಿಜಯಪುರ ಇವರಿಂದ “ಬಸವ ಜ್ಯೋತಿ ರಾಜ್ಯಪ್ರಶಸ್ತಿ 2018-19 “ಇವು ಈತ ಚಿತ್ರಕಲೆಯಲ್ಲಿ ಗಳಿಸಿದ ಹತ್ತು ಹಲವು ಪ್ರಶಸ್ತಿಗಳಲ್ಲಿ ಪ್ರಮುಖವಾದವುಗಳು .
ವಾಟರ್ ಕಲರ್ ,ಅಕ್ರಾಲಿಕ್ ಮಾಧ್ಯಮದಲ್ಲಿ ಅನೇಕ ಕಲಾಕೃತಿಗಳನ್ನು ರಚಿಸಿದ್ದು ಹಲವು ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದು, ಅದರಲ್ಲಿ 30 ಕ್ಕೂ ಮಿಕ್ಕ ಕಲಾಕೃತಿಗಳು ದೇಶ ವಿದೇಶಗಳಲ್ಲಿಯ ಮನೆಯ ಒಳಾಂಗಣ ಅಲಂಕಾರದಲ್ಲಿ ಸೇರ್ಪಡೆಯಾಗಿವೆ.
ತಂದೆ ಒಳಾಂಗಣ ಅಲಂಕಾರ ವೃತ್ತಿ ಯನ್ನೂ ನಿರ್ವಹಿಸುತ್ತಿದ್ದು ಮಗನ ಈ ಚಿತ್ರಗಳನ್ನು ಅಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ನಡೆದ ದ ಕ ಜಿಲ್ಲಾ ಪದ್ಮಶಾಲಿ ಮಹಾಸಭಾದ 78 ವರ್ಷದ ಮಹಾ ಸಭೆಯಲ್ಲಿ ಪುರಸ್ಕರಿಸಿ ಗೌರವಿಸಲಾಗಿದೆ.
ಇಂಡಿಯನ್ ಇನ್ಸಿಟ್ಯೂಟ್ ಅಫ್ ಸೈನ್ಸ್ ಎಜುಕೇಷನ್ ರೀಸರ್ಚಗೂ ಆಯ್ಕೆಯಾಗಿದ್ದಾನೆ.
ವೈದ್ಯಕೀಯ ಪ್ರವೇಶ ಪರೀಕ್ಷೆ NEET ಪರೀಕ್ಷೇಯಲ್ಲಿ 598 ಅಂಕಗಳಿಸಿದ್ದಾನೆ.
ಶ್ರೀನಿವಾಸ ಮೆಡಿಕಲ್ ಕಾಲೇಜಿನಲ್ಲಿ ಜನರಲ್ ಮೆರಿಟ್ ನಲ್ಲಿ ಈಗ ಪ್ರವೇಶ ಪಡೆದಿದ್ದು, MBBS ಶಿಕ್ಷಣಕ್ಕೆ ಸೇರ್ಪಡೆಯಾಗಿರುತ್ತಾನೆ.
ಈತನ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಯ ಸಾಧನೆ ಮಾದರಿಯಾಗಿದ್ದು, ಕೀರ್ತಿ ತರುವಲ್ಲಿ ಆಶೀರ್ವದಿಸಿ, ಅಭಿನಂದಿಸಿದ್ದಾರೆ.












