ಪುತ್ತೂರು: ಅಯೋಧ್ಯೆ ಯಾತ್ರಾರ್ಥಿಗೆ ರೈಲಿನಲ್ಲಿ ಅಪರಿಚಿತ ತಂಡದಿಂದ ದೋಚಿದ ಪ್ರಕರಣ

Views: 68
ಪುತ್ತೂರು: ಇಲ್ಲಿನ 30 ಯಾತ್ರಾರ್ಥಿ ತಂಡದೊಂದಿಗೆ ಅಯೋಧ್ಯ, ವಾರಣಾಸಿ, ಪ್ರಯಾಗ ಮತ್ತು ಗಯಾ ದಾರ್ಮಿಕ ಕ್ಷೇತ್ರಗಳಿಗೆ ತೆರಳಿದ್ದ ವೇಳೆ ತಂಡದಿಂದ ಬೇರ್ಪಟ್ಟ ಪುತ್ತೂರಿನ ವ್ಯಕ್ತಿಯೂಬ್ಬರಿಗೆ ರೈಲಿನಲ್ಲಿ ಅಪರಿಚಿತ ತಂಡದಿಂದ ದೋಚಿದ ಪ್ರಕರಣ ನಡೆದಿದೆ.
ಪುತ್ತೂರು ಬೆಟ್ಟಂಪಾಡಿ ಬಳಿಯ ಕಕ್ಕೂರು ನಿವಾಸಿ ಸುಬ್ರಹ್ಮಣ್ಯ ಭಟ್ (64) ಅವರಲ್ಲಿದ್ದ ಬ್ಯಾಗ್, ಹಣ, ಮೊಬೈಲ್ ಇನ್ನಿತರ ವಸ್ತುಗಳನ್ನು ರೈಲಿನಲ್ಲಿ ಅಪರಿಚಿತರು ದೋಚಿದ್ದಾರೆ.
ನಡೆದ ಘಟನೆ ಏನು?: ಪುತ್ತೂರಿನ ಸುಬ್ರಹ್ಮಣ್ಯ ಭಟ್ ಮತ್ತು ತಂಡದವರು ದಿಲ್ಲಿಗೆ ಹೊರಟು ಅಲ್ಲಿಂದ ದಿಲ್ಲಿಯ ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಅಲ್ಲಿ ಊಟ ಮಾಡಲು ಹೋಟೆಲಿಗೆ ತೆರಳಿ ಬಳಿಕ ರಿಕ್ಷಾದ ಮೂಲಕ ರೈಲು ನಿಲ್ದಾಣಕ್ಕೆ ವಾಪಾಸು ಬರಬೇಕಿತ್ತು, ಊಟ ಮುಗಿಸಿದ ನಂತರ ಐದಾರು ಆಟೋದಲ್ಲಿ 30 ಜನರು ಹೊರಟಿದ್ದಾರೆ. ಸುಬ್ರಹ್ಮಣ್ಯ ಭಟ್ ಮತ್ತು ಅವರ ಪತ್ನಿ ಇದ್ದ ರಿಕ್ಷಾದಲ್ಲಿ ಮೂವರು ರಿಕ್ಷಾದಿಂದ ಇಳಿದು ನಿಲ್ದಾಣಕ್ಕೆ ಹೊರಟರು ಸುಬ್ರಹ್ಮಣ್ಯ ಭಟ್ ಕೊನೆಯದಾಗಿ ಇಳಿದರು ರಿಕ್ಷಾ ಚಾಲಕ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿದರಿಂದ ಹೆಚ್ಚಿನ ಬಾಡಿಗೆ ನೀಡಿ ಬರುವಷ್ಟರಲ್ಲಿ ರೈಲು ಹೊರಟಿತ್ತು.ಪತಿ ರೈಲಿನೊಳಗೆ ಇರಬಹುದು ಎಂದುಕೊಂಡು ವೀಣಾ ಭಟ್ ರೈಲು ಏರಿದರು. ರೈಲು ಹೊರಟ ಮೇಲೆ ಪತಿ ಇಲ್ಲದಿರುವುದು ಗಮನಕ್ಕೆ ಬಂದಿದ್ದು ಫೋನ್ ಮಾಡಿದಾಗ ನನಗೆ ನನಗೆ ಇಲ್ಲಿ ರೈಲು ಮಿಸ್ ಆಗಿದೆ ಇನ್ನೊಂದು ರೈಲಿನಲ್ಲಿ ಬರುವುದಾಗಿ ಹೇಳಿದರು.
ಬಳಿಕ ರಾತ್ರಿ 8:30ಕ್ಕೆ ರೈಲುನಲ್ಲಿ ತೆರಳಿದ್ದರು.ರೈಲಿನ ಸಾಮಾನ್ಯ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದ ಸುಬ್ರಹ್ಮಣ್ಯ ಭಟ್ ಅವರನ್ನು ಅಪರಿಚಿತನೊಬ್ಬ ಸ್ನೇಹದಿಂದ ಮಾತಾಡಿದ್ದಾನೆ. ಮಧ್ಯರಾತ್ರಿ ಚಹಾ ಕುಡಿಯಲು ಕೊಟ್ಟಿದ್ದಾರೆ ತಂಡದಲ್ಲಿ ಇನ್ನೂ ಇಬ್ಬರಿದ್ದಾರೆ ಬೆಳಿಗ್ಗೆ 3:00 ಹೊತ್ತಿಗೆ ಅಪರಿಚಿತರು ನೀವು ಶೌಚಾಲಯಕ್ಕೆ ಹೋಗಿ ಬನ್ನಿ ನೀವು ಇಳಿಯುವ ನಿಲ್ದಾಣ ಹತ್ತಿರ ಬಂದಿದೆ ಎಂದರು ಹೀಗಾಗಿ ಸುಬ್ರಹ್ಮಣ್ಯ ಭಟ್ ಶೌಚಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಅಪರಿಚಿತರು ಲಗೇಜ್ ನ್ನು ದೋಚಿದರು. ನಂತರ ನಿದ್ರೆಯ ಮಂಪರಿನಲ್ಲಿ ಯಾವ ನಿಲ್ದಾಣದಲ್ಲಿ ಇಳಿಯಬೇನ್ನುವುದು ಅವರಿಗೆ ಗೊತ್ತಾಗಲಿಲ್ಲ ಅವರು ಅಯೋಧ್ಯೆಗೆ ತೆರಳದೆ ಅದರ ಹಿಂದಿನ ನಿಲ್ದಾಣದಲ್ಲಿ ಇಳಿದ ಭಟ್ಟರು ಸ್ಥಳೀಯರ ಸಹಕಾರವನ್ನು ಪಡೆದು ಲಕ್ನೋ ರೈಲ್ವೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.
ಜೇಬಿನಲ್ಲಿರುವ ಅಲ್ಪಸಲ್ಪ ಹಣದಿಂದ ಮೊಬೈಲ್ ಮತ್ತು ಸಿಮ್ ಖರೀದಿಸಿದರು ರಾತ್ರಿ 7 ಗಂಟೆಗೆ ದೂರವಾಣಿ ಮೂಲಕ ಪತ್ನಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದರು.
ಸುಬ್ರಹ್ಮಣ್ಯ ಭಟ್ಟರು ತಂಡದಿಂದ ಪ್ರತ್ಯೇಕಗೊಂಡ ವಿಷಯ ಬೆಂಗಳೂರಿನಲ್ಲಿರುವ ಪುತ್ರಿಯ ಗಂಡನಿಗೆ ತಿಳಿದು ಅವರು ಪ್ರತಾಪಗಡಕ್ಕೆ ತಲುಪಿ ಭಟ್ಟರನ್ನು ಸಂಪರ್ಕಿಸಿ ಬಳಿಕ ಗಯಾ ಕಾಶಿ ದರ್ಶನ ಮುಗಿಸಿ ಮನೆಗೆ ತೆರಳಿದ್ದಾರೆ






