ಮಾಹಿತಿ ತಂತ್ರಜ್ಞಾನ

ಅಪರಿಚಿತ ನಂಬರ್ನಿಂದ ಮೆಸೇಜ್ ಬರುತ್ತಾ?  ಸದ್ಯದಲ್ಲೇ ಮುಕ್ತಿ ನೀಡಲಿದೆ ವಾಟ್ಸ್ಆ್ಯಪ್

Views: 80

ಮೆಟಾ ಒಡೆತನದ ವಾಟ್ಸ್ಆ್ಯಪ್ ಸದಾ ಏನಾದರೊಂದು ಅಪ್ಡೇಡ್ಸ್ ನೀಡುತ್ತಿರುತ್ತದೆ. ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ ಮತ್ತು ಅವರಿಗಾಗಿ ಹೊಸ ಫೀಚರ್ಸ್ ಪರಿಚಯಿಸುತ್ತಿರುತ್ತದೆ. ಅದರಂತೆಯೇ ಇದೀಗ ಬಳಕೆದಾರರ ಸುರಕ್ಷತೆಯತ್ತ ಗಮನ ಹರಿಸಿ ಅಪರಿಚಿತ ನಂಬರ್ನಿಂದ ಬರುವ ಸಂದೇಶವನ್ನು ನಿರ್ಬಂಧಿಸುವ ಆಯ್ಕೆಯನ್ನು ವಾಟ್ಸ್ಆ್ಯಪ್ ನೀಡಲು ಮುಂದಾಗಿದೆ.

ವಾಟ್ಸ್ಆ್ಯಪ್ ವೆಬ್ ಸ್ಕ್ಯಾಮ್ನಿಂದ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ನೂತನ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಶೀಘ್ರದಲ್ಲೇ ನೂತನ ಫೀಚರ್ ಬರಲಿದೆ. ಇದರ ಮೂಲಕ ಅಪರಿಚಿತ ಖಾತೆಗಳಿಂದ ಬರುವ ಸಂದೇಶವನ್ನು ನಿರ್ಬಂಧಿಸಬಹುದಾಗಿದೆ.

ಸದ್ಯ ವಾಟ್ಸ್ಆ್ಯಪ್ ವಿಸ್ಕೃತವಾಗಿ ಬೆಳೆದಿದೆ. ಪರಿಚಯವಿಲ್ಲದವರು ಸಂದೇಶವನ್ನು ಕಳುಹಿಸುವ ಮೂಲಕ ಸ್ಕ್ಯಾಮ್ಗೆ ಬೀಳಿಸುವ ಅದೆಷ್ಟೋ ಪ್ರಸಂಗಗಳು ಬೆಳಕಿಗೆ ಬರುತ್ತಿರುತ್ತವೆ. ಆದರೀಗ ಅಂತವುಗಳನ್ನು ನಿರ್ಬಂಧಿಸುವ ಗುರಿಯತ್ತ ವಾಟ್ಸ್ಆ್ಯಪ್ ಕೆಲಸ ಮಾಡುತ್ತಿದೆ. ಅಂದಹಾಗೆಯೇ ಈ ವೈಶಿಷ್ಟ್ಯವನ್ನು ಮಾತ್ರ ವಾಟ್ಸ್ಆ್ಯಪ್ ಸಾರ್ವಜನಿಕವಾಗಿ ನೀಡುತ್ತಿಲ್ಲವಂತೆ.

ಒಟ್ಟಿನಲ್ಲಿ ವಾಟ್ಸ್ಆ್ಯಪ್ ಬಳಕೆದಾರರು ದುರುದ್ದೇಶಪೂರಿತ ಲಿಂಕ್ಗೆ ಬಲಿಯಾಗುವುದು ಅಥವಾ ಸ್ಕ್ಯಾಮ್ಗೆ ಒಳಗಾಗಿ ಸಮಸ್ಯೆ ಎದುರಿಸುವುದನ್ನು ತಪ್ಪಿಸುವ ಸಲುವಾಗಿ ನೂತನ ಫೀಚರ್ ಸಹಕರಿಸುತ್ತದೆ. ಶೀಫ್ರದಲ್ಲೇ ಈ ಫೀಚರ್ ಸಿಗಲಿದೆ. ಅಪ್ಡೇಡ್ ಮಾಡುವ ಮೂಲಕ ಬಳಸಬಹುದಾಗಿದೆ.

Related Articles

Back to top button