ರಾಜಕೀಯ
ವಿಧಾನ ಪರಿಷತ್ ಸಭಾನಾಯಕರಾಗಿ ಭೋಸರಾಜ್ ಆಯ್ಕೆ

Views: 34
ಬೆಂಗಳೂರು: ವಿಧಾನಪರಿಷತ್ನ ಸಭಾನಾಯಕರನ್ನಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜ್ ಅವರು ಮುಂದುವರೆಸಲಾಗಿದೆ.
ಇತ್ತೀಚೆಗೆ ವಿಧಾನಸಭೆಯಿಂದ ವಿಧಾನಪರಿಷತ್ ಗೆ ಮರು ಆಯ್ಕೆಗೊಂಡ ಸಚಿವ ಎನ್.ಎಸ್.ಭೋಸರಾಜ್ ಅವರನ್ನು ವಿಧಾನಪರಿಷತ್ನ ಸಭಾನಾಯಕರನ್ನಾಗಿ ಮತ್ತೆ ನೇಮಕ ಮಾಡಲಾಗಿದೆ.ಮುಂಗಾರು ಅಧಿವೇಶನದ ಮೊದಲ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಭಾ ನಾಯಕರಾಗಿ ಭೋಸರಾಜ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯಂತೆ ಭೋಸರಾಜ್ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಿಸುತ್ತಿದ್ದಂತೆ ಸದನದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.ಹಿರಿತನದ ಆಧಾರದ ಮೇಲೆ ಭೋಸ್ರಾಜ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆಯೂ ಅವರು ಸಭಾ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.






