ಮಾಹಿತಿ ತಂತ್ರಜ್ಞಾನ
ವಾಟ್ಸ್ಆ್ಯಪ್ ಬಳಸುತ್ತಿದ್ದೀರಾ?… ನಿಮಗೊಂದು ಸಿಹಿ ಸುದ್ದಿ…ಏನದು?

Views: 124
ವಾಟ್ಸ್ಆ್ಯಪ್ ವಿವಿಧ ಭಾಷೆಗಳನ್ನು ಸುಲಭವಾಗಿ ಭಾಷಾಂತರಿಸುವ ಅತ್ಯಾಧುನಿಕ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಇಂಗ್ಲೀಷ್, ರಷ್ಯಾ, ಸ್ಪ್ಯಾನಿಷ್, ಹಿಂದಿ, ಪೋರ್ಚುಗೀಸ್ ಸೇರಿದಂತೆ ಅನೇಕ ಭಾಷೆಯನ್ನು ಟ್ರಾನ್ಸ್ಲೇಟ್ ಮಾಡುವ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.
ವಾಟ್ಸ್ಆ್ಯಪ್ ಬಳಕೆದಾರರು ಭಾಷಾ ಪ್ಯಾಕ್ ಅನ್ನು ಡೌನ್ಲೋಡ್ ಮಾಡಬೇಕಿದೆ. ಪ್ರಾರಂಭದಲ್ಲಿ ಭಾರತೀಯ ಬಳಕೆದಾರರಿಗೆ ಇಂಗ್ಲಿಷ್, ಹಿಂದಿ ಭಾಷೆಗಳನ್ನು ಭಾಷಾಂತರಿಸುವ ಆಯ್ಕೆ ಸಿಗಲಿದೆ. ಆದರೆ ಭವಿಷ್ಯದಲ್ಲಿ ಸ್ಥಳೀಯ ಭಾಷೆಗಳನ್ನು ವ್ಯಾಟ್ಸ್ಆ್ಯಪ್ ಅನ್ನು ಸೇರಲಿದೆ ಎನ್ನಲಾಗುತ್ತಿದೆ. ಅಪ್ಲಿಕೇಶನ್ ಬಳಸುತ್ತಿರುವಾಗಲೇ ಸಂದೇಶಗಳನ್ನು ಭಾಷಾಂತರಿಸಲು ಇದು ಅನುವು ಮಾಡಿಕೊಡುತ್ತದೆ ಎನ್ನಲಾಗುತ್ತಿದೆ.
ಪ್ರಸ್ತುತ ನೂತನ ಫೀಚರ್ ಆ್ಯಂಡ್ರಾಯ್ಡ್ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ನವೀಕರಣ ಆವೃತ್ತಿ 2.24.15.8ನಲ್ಲಿ ಮಾತ್ರ ಕಂಡುಬರುತ್ತದೆ. ಸದ್ಯದಲ್ಲೇ ಹೊಸ ಫೀಚರ್ ಎಲ್ಲರಿಗೂ ಸಿಗಲಿದೆ.