ಪಾನ್ ಕಾರ್ಡಿಗೆ ಆಧಾರ್ ಲಿಂಕ್ ಕಡ್ಡಾಯ ! ಲಿಂಕ್ ಮಾಡದಿದ್ದರೆ ಹೆಚ್ಚಿನ ಟಿಡಿಎಸ್ ಕಡಿತ, ಲಿಂಕ್ ಮಾಡುವುದು ಹೇಗೆ?

Views: 41
ಮಂಗಳೂರು: ಮೇ. 31ರೊಳಗೆ ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಅವಶ್ಯಕವಾಗಿದೆ. ಒಂದು ವೇಳೆ ಲಿಂಕ್ ಮಾಡದಿದ್ರೆ ಡಬಲ್ ಟಿಡಿಎಸ್ ಪಾವತಿಸಬೇಕಾಗುತ್ತದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರ್ ಟ್ಯಾಕ್ಸ್ ಸುತ್ತೋಲೆ ಹೊರಡಿಸಿದೆ. ನೀವು ಹೆಚ್ಚುವರಿ ತೆರಿಗೆಯನ್ನು ತಪ್ಪಿಸಿಕೊಳ್ಳಬೇಕು ಅಂದರೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇನ್ನು ಮನೆಯಲ್ಲೇ ಕುಳಿತು ಆಧಾರ್‌ಗೆ ಪ್ಯಾನ್ ಲಿಂಕ್ ಮಾಡಬಹುದಾಗಿದೆ.
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡಿಗೆ ಏಕೆ ಲಿಂಕ್ ಮಾಡಿಸಬೇಕು ?
ಯಾರೆಲ್ಲ 2017ರ ನಂತರ ಪ್ಯಾನ್ ಕಾರ್ಡ್ಗಳನ್ನು ಪಡೆದುಕೊಂಡಿದ್ದೀರಾ ಅಂತವರಿಗೆ ಇದು ಕಡ್ಡಾಯವಾಗುವಂತಹ ಮಾಹಿತಿ ಅಲ್ಲ ಏಕೆಂದರೆ ಆ ಒಂದು ಸಂದರ್ಭದಲ್ಲಿ ಅವರು ಆಧಾರ್ ಕಾರ್ಡ್ ಗಳನ್ನು ಕೂಡ ಪಡೆದುಕೊಂಡಿರುತ್ತಾರೆ. ಅಂತವರಿಗೆ ಈ ಒಂದು ನಿಯಮ ಅನ್ವಯವಾಗುವುದಿಲ್ಲ.
ಯಾರೆಲ್ಲ 2017ರ ಮುಂಚಿತ ದಿನಗಳಲ್ಲಿ ಪ್ಯಾನ್ ಕಾರ್ಡ್ಗಳನ್ನು ಬೇರೆ ದಾಖಲಾತಿಗಳನ್ನು ನೀಡಿ ಪಡೆದುಕೊಂಡಿರುತ್ತಾರೆ ಅಂತವರಿಗೆ ಮಾತ್ರ ಈ ಒಂದು ನಿಯಮ ಕಡ್ಡಾಯವಾಗಿದೆ. ಅಂತಹ ಅಭ್ಯರ್ಥಿಗಳು ಇನ್ನೂ ಕೂಡ ಪ್ಯಾನ್ ಕಾರ್ಡ್ಗಳನ್ನು ಆಧಾರ್ ಕಾರ್ಡ್ಗಳಿಗೆ ಲಿಂಕ್ ಮಾಡದಿದ್ದರೆ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಮಾಡಿರಿ.
ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ಅನ್ನು ಈ ರೀತಿ ಲಿಂಕ್ ಮಾಡಿ.
ಮೊದಲಿಗೆ ಎಲ್ಲರೂ ಕೂಡ ಈ ಒಂದು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
ಕ್ವಿಕ್ ಲಿಂಕ್ ಎಂಬುದನ್ನು ಕ್ಲಿಕ್ಕಿಸಿರಿ ಆನಂತರ ಆಧಾರ್ ಲಿಂಕ್ ಎಂಬುದನ್ನು ಕ್ಲಿಕ್ಕಿಸಿರಿ.
ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿರಿ.
ನಮೂದಿಸಿದ ನಂತರ ಮೌಲಿಕರಿಸಿ ಎಂಬುದನ್ನು ಕ್ಲಿಕ್ಕಿಸಿ.
ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿರಿ ಬಳಿಕ ಲಿಂಕ್ ಆದಾರ್ ಎಂಬುದನ್ನು ಕ್ಲಿಕ್ಕಿಸಿ.
ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ರವಾನೆ ಆಗಿರುತ್ತದೆ ಆ ಒಂದು ಓಟಿಪಿಯನ್ನು ಇಲ್ಲಿ ನಮೂದಿಸುವ ಮುಖಾಂತರ ಮೌಲಿಕರಿಸು ಎಂಬುದನ್ನು ಕ್ಲಿಕ್ಕಿಸಿರಿ.
ಬಳಿಕ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಕೂಡ ಆಗಿರುತ್ತದೆ.