ಜೂನ್ 16 ರಂದು ಸಾಲಿಕೇರಿಯಲ್ಲಿ “ಪದ್ಮಶಾಲಿ ಕುಣಿತ ಭಜನಾ ಸ್ಪರ್ಧೆ -2024”

Views: 1825
ಬ್ರಹ್ಮಾವರ: ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ( ರಿ.) ಉಡುಪಿ, ಮಹಿಳಾ ವೇದಿಕೆ,ಯುವ ವೇದಿಕೆ, ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆತಿಥ್ಯ ಮತ್ತು ಸಹಯೋಗದಲ್ಲಿ ದಿನಾಂಕ 16.06.2024ನೇ ರವಿವಾರ ಬೆಳಿಗ್ಗೆ 9:00 ರಿಂದ ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಐತಾರದ ಐತಾ 16 ಶ್ರೀ ವೀರಭದ್ರ ದೇವಸ್ಥಾನಗಳ ಸಮಾಜ ಬಾಂಧವರಿಗಾಗಿ “ಪದ್ಮಶಾಲಿ ಕುಣಿತ ಭಜನಾ ಸ್ಪರ್ಧೆ- 2024” ನಡೆಯಲಿದೆ.
ಭಜನಾ ಸ್ಪರ್ಧೆಯ ನಿಯಮಗಳು
- ನಮ್ಮ ಸಂಪ್ರದಾಯದ ಕಲೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
- ಈ ಸ್ಪರ್ಧೆ 16 ಶ್ರೀ ವೀರಭದ್ರ ದೇವಸ್ಥಾನಗಳ ವ್ಯಾಪ್ತಿಯ ಉಡುಪಿ, ದ.ಕ ಜಿಲ್ಲೆಗಳ ಮತ್ತು ಕಾಸರಗೋಡು ಜಿಲ್ಲೆಗಳ ಮಟ್ಟದಲ್ಲಿ ನಡೆಯಲಿದೆ.
- ಈ ಸ್ಪರ್ಧೆಯಲ್ಲಿ ಪ್ರತಿ ದೇವಸ್ಥಾನದಿಂದ ಒಂದು ತಂಡಕ್ಕೆ ಮಾತ್ರ ಭಾಗವಹಿಸಲು ಅವಕಾಶವಿದ್ದು ಕನಿಷ್ಠ 10 ಹಾಗೂ ಗರಿಷ್ಠ 12 ಮಂದಿ ಭಾಗವಹಿಸಬಹುದು.
- ವಯೋಮಿತಿ ಮತ್ತು ಲಿಂಗಭೇದವಿಲ್ಲ.
- ಭಕ್ತಿ ಪ್ರಧಾನವಾದ ದಾಸ ಕೀರ್ತನೆಯನ್ನೇ ಹಾಡುವುದು.
- ತಂಡದ ಸಮವಸ್ತ್ರವು ಭಜನಾ ಸಂಪ್ರದಾಯಕ್ಕೆ ಹೊಂದಾಣಿಕೆಯಾಗಬೇಕು.
- ಪ್ರತಿ ತಂಡಕ್ಕೆ 15 ನಿಮಿಷಗಳ ಕಾಲಾವಕಾಶ ನೀಡಲಾಗುವುದು.
- ಹಿಮ್ಮೇಳದಲ್ಲಿ ತಾಳ ಮತ್ತು ಕಂಜೂರ ಮಾತ್ರ ಬಳಕೆಗೆ ಮಾಡುವುದು.
- ಭಜನೆ ಪ್ರಾರಂಭ, ಸಮವಸ್ತ್ರ, ಹಾಡಿನ ಆಯ್ಕೆ, ರಾಗ ,ತಾಳ, ಲಯ, ಕುಣಿತದ ಸಂಯೋಜನೆ, ತಂಡದ ಹೊಂದಾಣಿಕೆ, ತಂಡದ ಕ್ರಿಯಾಶೀಲತೆ ಹಾಗೂ ಭಜನೆಯ ಮುಕ್ತಾಯವನ್ನು ಗಮನಿಸಿಕೊಂಡು ತಂಡಕ್ಕೆ ಅಂಕಗಳನ್ನು ನೀಡಲಾಗುವುದು.
- ಸ್ಪರ್ಧೆ ನಡೆಯುವ ದಿನದಂದು ತಂಡವು ನಿಗದಿತ ಸಮಯಕ್ಕೆ ಹಾಜರಿದ್ದು 30 ನಿಮಿಷಗಳ ಮೊದಲು ತಮ್ಮ ಆಯ್ಕೆ ಸಂಖ್ಯೆಯನ್ನು ಪಡೆದುಕೊಳ್ಳುವುದು.
- ಸ್ಪರ್ಧೆಯಲ್ಲಿ ವಿಜೇತರಾದ ದೇವಸ್ಥಾನದ ತಂಡದವರಿಗೆ ಪ್ರಥಮ ರೂ. 5,555 ದ್ವಿತೀಯ ರೂ. 3,333 ಮತ್ತು ತೃತೀಯ ರೂ. 2,222 ಬಹುಮಾನ ಹಾಗೂ ಫಲಕ ನೀಡಿ ಗೌರವಿಸಲಾಗುವುದು.
- ಸಂಘಟಕರ ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮ
- ಸಂಘಟಕರು ಯಾವುದೇ ಬದಲಾವಣೆಗಳು ಇದ್ದಲ್ಲಿ ತಂಡವು ಸಹಕರಿಸುವುದು.
- ಭಾಗವಹಿಸುವ ತಂಡವು ದಿನಾಂಕ 10.06.2024ರ ಒಳಗೆ ನೊಂದಾವಣಿ ಮಾಡಿಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ನೋಂದಾವಣಿಗಾಗಿ ಸಂಪರ್ಕ
ಶ್ರೀ ಜಯರಾಮ ಶೆಟ್ಟಿಗಾರ್ ಮಣಿಪಾಲ್ 9844328177
ಶ್ರೀ ಎಸ್ ಟಿ ಶೆಟ್ಟಿಗಾರ್ ಮುದ್ರಾಡಿ ಪ್ರಧಾನ ಕಾರ್ಯದರ್ಶಿ, ಮಹಾಸಭಾ 9448887682
ಶ್ರೀ ಉಮೇಶ್ ಕುಮಾರ್ ಮಾರ್ಪಳ್ಳಿ ಪ್ರಧಾನ ಕಾರ್ಯದರ್ಶಿ ವಿದ್ಯಾವರ್ಧಕ 9611203909
ತಮ್ಮೆಲ್ಲರನ್ನು ಆದರದಿಂದ ಸ್ವಾಗತಿಸುವ;
ಶ್ರೀರಾಮದಾಸ ಶೆಟ್ಟಿಗಾರ ಪಣೆಯಾಡಿ,ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು.
ಶ್ರೀ ಲಕ್ಷ್ಮಣ ಕೊಡಿಯಾಲ್ ಬೈಲು, ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ ಉಡುಪಿ.
ಶ್ರೀಮತಿ ಇಂದಿರಾ ಸಂಚಾಲಕಿ ಮಹಿಳಾ ವೇದಿಕೆ
ಶ್ರೀ ಸುರೇಶ್ ಶೆಟ್ಟಿಗಾರ್ ಭಂಡಾರದ ಮನೆ ಆಡಳಿತ ಮೊಕ್ತೇಸರರು ಮತ್ತು ಆಡಳಿತ ಮಂಡಳಿ.
ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು
ಸರ್ವರಿಗೂ ಆದರದ ಸ್ವಾಗತ








