ಮೇ.12 ರಂದು ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರತಿಷ್ಠಾ ವರ್ಧಂನ್ಯೋತ್ಸವ

Views: 72
ಕುಂದಾಪುರ :ವಕ್ವಾಡಿ ಗ್ರಾಮದ ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ಪ್ರತಿಷ್ಠಾ ವರ್ಧಂನ್ಯೋತ್ಸವ ಕಾರ್ಯಕ್ರಮ ಮೇ 12ರಂದು ಭಾನುವಾರ ನಡೆಯಲಿದೆ.
ಆ ಪ್ರಯುಕ್ತ ಬೆಳಿಗ್ಗೆ 9 ರಿಂದ ಶ್ರೀ ದೇವರಿಗೆ ದೇವರಿಗೆ ಪಂಚವಿಂಶತಿ ಕಲಶಾಭಿಷೇಕ, ರುದ್ರಾಭಿಷೇಕ ಹಾಗೂ ನಾಗದೇವರಿಗೆ ಕಲ ಶಾಭಿಷೇಕ ಜರಗಲಿರುವುದು.
ಸಂಜೆ 6 ರಿಂದ ರಂಗ ಪೂಜೆ, ಬಲಿ ಉತ್ಸವ ಜರಗಲಿರುವುದು.
ಈ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಊರಿನ ಪ್ರತಿ ಮನೆಯವರು ದೇವಸ್ಥಾನಕ್ಕೆ ಬಂದು ಶ್ರೀದೇವರ ಪ್ರಸಾದ ಸ್ವೀಕರಿಸಿ ಶ್ರೀ ಮಹಾಲಿಂಗೇಶ್ವರನ ಕೃಫೆಗೆ ಪಾತ್ರರಾಗಬೇಕಾಗಿ ವಿನಂತಿ
ವಿಶೇಷ ಸೂಚನೆ,
*ಶ್ರೀ ಮಹಾಲಿಂಗೇಶ್ವರ ಚಂಡೆ ಬಳಗದವರಿಂದ ಚಂಡೆ ವಾದನ
*ಹೊರೆ ಕಾಣಿಕೆಯನ್ನು ಆದರದಿಂದ ಸ್ವೀಕರಿಸಲಾಗುವುದು.
*ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಉದಾರ ಧನ ಸಹಾಯ ಮಾಡುವವರಿಗೆ ಕಳಕಳಿಯ ವಿನಂತಿ
*ಸಭಾಭವನದ ಮೇಲ್ಚಾವಣಿ ನಿರ್ಮಾಣಕ್ಕೆ ಅಂದಾಜು ವೆಚ್ಚ ರೂ. 8 ಲಕ್ಷ ತಗಲುತ್ತದೆ. ಭಕ್ತಾ ಭಿಮಾನಿಗಳು ಸಹಕರಿಸಬೇಕಾಗಿ ವಿನಂತಿ.
ಸರ್ವರನ್ನು ಆದರಿಂದ ಸ್ವಾಗತಿಸುವ,
ಮೊಕ್ತೇಸರರು ಮತ್ತು ಅರ್ಚಕ ವೃಂದ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಕ್ವಾಡಿ







