ಧಾರ್ಮಿಕ

ಕುಂದಾಪುರ ವಡೇರಹೋಬಳಿ ದೇವಸ್ಥಾನಕ್ಕೆ ನುಗ್ಗಿ  ಹುಂಡಿಯ ಹಣ, ಪೂಜಾ ಸಾಮಗ್ರಿ ಕಳ್ಳತನ

Views: 81

ಕುಂದಾಪುರ: ವಡೇರಹೋಬಳಿ ಶ್ರೀ ಯಕ್ಷೇಶ್ವರಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ, ಕಾಣಿಕೆ ಹುಂಡಿಯಲ್ಲಿದ್ದ ಹಣ, ಪೂಜಾ ಸಾಮಗ್ರಿಗಳನ್ನು ಕಳ್ಳತನ  ಮಾಡಿರುವ ಘಟನೆ ನಡೆದಿದೆ.

ಬೆಳಿಗ್ಗೆ 10ಕ್ಕೆ ದೇವಸ್ಥಾನದ ಅರ್ಚಕರು ಪೂಜೆ ಮುಗಿಸಿ, ಚಿಲಕ ಹಾಕಿ ತೆರಳಿರುತ್ತಾರೆ. ಅದೇ ದಿನ ಅಪರಾಹ್ನ 3 ಗಂಟೆ ಸುಮಾರಿಗೆ ದೇವಸ್ಥಾನದ ಕಾರ್ಯದರ್ಶಿ ಸಂತೋಷ್‌ ಬಂದು ನೋಡಿದಾಗ ಕಾಣಿಕೆ ಹುಂಡಿ ಕಳವಾಗಿರುವುದು ತಿಳಿದುಬಂದಿದೆ.

2 ಕೆ.ಜಿ. ತೂಕದ 5 ಸಾ.ರೂ. ಮೌಲ್ಯದ ತಾಮ್ರದ ಕೊಡಪಾನ, 6 ಕೆ.ಜಿ. ತೂಕದ  10 ಸಾ. ರೂ. ಮೌಲ್ಯದ ಹಿತ್ತಾಳೆ ದೀಪ, 15 ಸಾ.ರೂ. ನಗದು ಸಹಿತ 30 ಸಾವಿರ ರೂ. ಮೌಲ್ಯದ ಸೊತ್ತುಗಳು ಕಳವಾಗಿದೆ.

ದೇವಸ್ಥಾನದ ಆಡಳಿತ ಮಂಡಳಿಯ ಮಂಜುನಾಥ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!