ಧಾರ್ಮಿಕ

ವಿಜಯಪುರ ಲಚ್ಯಾಣ ರಥೋತ್ಸವದ ಚಕ್ರಕ್ಕೆ ಸಿಲುಕಿ ಇಬ್ಬರು ಸಾವು

Views: 67

ವಿಜಯಪುರ: ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಸಾವಿಗೀಡಾಗಿ, ಓರ್ವನಿಗೆ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಮೃತಪಟ್ಟವರನ್ನು ಬಂಡು ಕಟಕಧೋಂಡ (35), ಸೋಬು ಶಿಂಧೆ (55) ಎಂದು ಗುರುತಿಸಲಾಗಿದೆ.

ಲಚ್ಯಾಣ ಗ್ರಾಮದ ಪವಾಡ ಪುರುಷ ಸಿದ್ದಲಿಂಗ ಮುತ್ಯಾನ ಜಾತ್ರಾ ಮಹೋತ್ಸವ ನಿಮಿತ್ತ ಗೋಧೋಳಿ ಮುಹೂರ್ತದಲ್ಲಿ ನಡೆದ ಮಹಾರಥೋತ್ಸವ ವೇಳೆ ರಥ ಎಳೆಯುವ ಸಂದರ್ಭ ಆಯತಪ್ಪಿ ರಥದ ಚಕ್ರದಡಿ ಮೂವರು ಸಿಲುಕಿದ್ದಾರೆ.

ಈ ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾನೆ.

ಗಂಭೀರ ಗಾಯಾಳುವನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಘಟನೆ ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Related Articles

Back to top button
error: Content is protected !!