PM-KISAN: ನಿರೀಕ್ಷಿಸಿ..ಕೆಲವೇ ಗಂಟೆಗಳಲ್ಲಿ ರೈತರ ಖಾತೆಗೆ 16 ನೇ ಕಂತಿನ ಹಣ ಜಮೆ
Views: 75
ಪಿಎಂ ಕಿಸಾನ್ ಸಮ್ಮಾನ್ ಯೋಜನೆ 16ನೇ ಕಂತಿನ ಹಣಕ್ಕಾಗಿ ದೇಶದಾದ್ಯಂತ ಕೋಟ್ಯಾಂತರ ರೈತರು ಕಾಯುತ್ತಿದ್ದಾರೆ. ಆದರೆ ಕೆಲವೇ ಗಂಟೆಗಳಲ್ಲಿ ರೈತರ ನಿರೀಕ್ಷೆ ಈಡೇರಲಿದೆ. ಫೆಬ್ರವರಿ 28 ಬುಧವಾರ ಸರ್ಕಾರವು ರೈತರ ಬ್ಯಾಂಕ್ ಖಾತೆಗಳಿಗೆ ಕಿಸಾನ್ ಸಮ್ಮಾನ್ ನಿಧಿಯ16 ನೇ ಕಂತು ಅನ್ನು ವರ್ಗಾಯಿಸಲಿದೆ.
ಈ ಕುರಿತ ಮಾಹಿತಿಯನ್ನು ಕೇಂದ್ರ ಸರ್ಕಾರ ದೃಡಪಡಿಸಿದೆ. ಇದರಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 16ನೇ ಕಂತು ರೂ. 21,000 ಕೋಟಿಗಳನ್ನು ಮಹಾರಾಷ್ಟ್ರದ ಯವತ್ಮಾಲ್‌ನಿಂದ 28 ಫೆಬ್ರವರಿ 2024 ರಂದು ಪ್ರಧಾನಿ ಮೋದಿ ಬಿಡುಗಡೆ ಮಾಡುತ್ತಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಫೆಬ್ರವರಿ 24, 2019 ರಂದು ಪ್ರಾರಂಭಿಸಲಾಯಿತು. ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ದೇಶದ ಅರ್ಹ ರೈತರಿಗೆ ವಾರ್ಷಿಕ 6000 ರೂಪಾಯಿ ಗಳನ್ನು ನೀಡಲಿದೆ. ಆದರೆ ಯೋಜನೆ ಮೂಲಕ ರೈತರಿಗೆ ಒಂದೇ ಬಾರಿಗೆ 6000 ರೂಪಾಯಿ ನೀಡದೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಆಗುವಂತೆ ತಲಾ 2000 ರೂಪಾಯಿಗಳನ್ನು 3 ಕಂತುಗಳಲ್ಲಿ ಬಿಡುಗಡೆ ಮಾಡುತ್ತಿದೆ.
ಕೇಂದ್ರ ಸರ್ಕಾರ ಇದುವರೆಗೂ ಕಿಸಾನ್ ಸಮ್ಮಾನ್ ಯೋಜನೆ ಅಡಿ 15 ಕಂತುಗಳಲ್ಲಿ ಹಣವನ್ನು ರೈತರ ಖಾತೆಗೆ ಜಮೆ ಮಾಡಿದೆ. ಈ ಪೈಕಿ 11 ಕೋಟಿಗೂ ಹೆಚ್ಚು ರೈತರು 2.81 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಲಾಭ ಪಡೆದಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ಹಣ ಕೇವಲ ಇ-ಕೆವೈಸಿ ಮಾಡಿದ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ನೀವು ಕಿಸಾನ್ ನಿಧಿಯ ಮುಂದಿನ ಕಂತನ್ನು ಪಡೆಯಲು ಬಯಸಿದರೆ, ನೀವು ಇ-ಕೆವೈಸಿ ಪಡೆಯಬೇಕು.
ಅಷ್ಟೇ ಅಲ್ಲದೇ, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯು 16 ನೇ ಕಂತು ಪ್ರಯೋಜನವನ್ನು ಪಡೆಯಲು ತನ್ನ ಭೂಮಿಯನ್ನು ಸಹ ನೋಂದಾಯಿಸಿಕೊಳ್ಳಬೇಕು. ಹಾಗೆ ಮಾಡಲು ವಿಫಲರಾದವರ ಹೆಸರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 16 ನೇ ಕಂತಿನ ಹಣ ಪಡೆಯುವ ಪಟ್ಟಿಯಿಂದ ದೂರ ಉಳಿಯುತ್ತದೆ.
ಅಂದರೆ, 14 ಮತ್ತು 15ನೇ ಕಂತಿನ ಹಣದೊಂದಿಗೆ 16ನೇ ಕಂತಿನ ಹಣವನ್ನು ನೀಡಲಾಗುತ್ತದೆ. ಇದರೊಂದಿಗೆ ಒಮ್ಮೆಗೆ 6 ಸಾವಿರ ರೂಪಾಯಿ ಹಣ ರೈತರ ಖಾತೆಗೆ ಜಮೆ ಆಗಲಿದೆ. ಒಂದೊಮ್ಮ 15ನೇ ಕಂತಿನ ಹಣ ಇ-ಕೆವೈಸಿ ಸಮಸ್ಯೆಯಿಂದ ಬಂದಿಲ್ಲ ಎಂದರೆ ಆ ಮೊತ್ತವನ್ನು ಕೂಡ ಈ ಬಾರಿ ಒಟ್ಟಿಗೆ ಜಮೆ ಮಾಡುವ ಸಾಧ್ಯತೆ ಇದೆ.
ಒಂದೊಮ್ಮೆ ರೈತರ ಖಾತೆಗೆ ಹಣ ಸಂದಾಯ ಆಗಿಲ್ಲ ಎಂದರೆ ಅವರು PM-KISAN ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ದೂರು ನೀಡಲು 011-24300606 ಮತ್ತು 155261 ಅಥವಾ ಟೋಲ್ ಫ್ರೀ ಸಂಖ್ಯೆ 18001155266 ಗೆ ಕರೆ ಮಾಡಿ ದೂರು ನೀಡಬಹುದು. ಇಷ್ಟೇ ಅಲ್ಲದೇ, pmkisan-ict@gov.in ಅಥವಾ pmkisan-funds@gov.inಗೆ ಇಮೇಲ್ ಮೂಲಕ ದೂರು ಸಲ್ಲಿಕೆ ಮಾಡಬಹುದಾಗಿದೆ.