ಶ್ರೀಮತಿ ಆಸ್ಮಾ ಬಾನುಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಕೃಷಿ ಪ್ರಶಸ್ತಿಗೆ ಆಯ್ಕೆ
Views: 4
ಕುಂದಾಪುರ: ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ (ರಿ) ವತಿಯಿಂದ ಅಪ್ಪಣ್ಣ ಹೆಗ್ಡೆಯವರ 89ನೇ ಹುಟ್ಟು ಹಬ್ಬ ಆಚರಣೆಯ ಸಮಾರಂಭದಲ್ಲಿ ಪ್ರದಾನ ಮಾಡುವ ಕೃಷಿ ಪ್ರಶಸ್ತಿಯನ್ನು ಕಾರ್ಕಳದ ಶ್ರೀಮತಿ ಆಸ್ಮಾ ಬಾನು ಅವರು ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ನ ಅಧ್ಯಕ್ಷ ಬಿ.ರಾಮ್ ಕಿಶನ್ ಹೆಗ್ಡೆ ತಿಳಿಸಿದ್ದಾರೆ.
ಡಿಸೆಂಬರ್ 24ರಂದು ಬಸ್ರೂರು ಶಾರದಾ ಕಾಲೇಜು ವಠಾರದಲ್ಲಿ ನಡೆಯುವ ಸಮಾರಂಭದಲ್ಲಿ ಉಡುಪಿ ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಪ್ರಶಸ್ತಿ ಪ್ರದಾನ ಮಾಡಿ, ಆಶೀರ್ವಾದ ಮಾಡಲಿಕ್ಕಿದ್ದಾರೆ.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀಮತಿ ಆಸ್ಮಾ ಬಾನು ಅವರು ಮೂಡುಬಿದರೆಯ ದಿ.ಮೊಹಮ್ಮದ್ ಶಫಿ ಹಾಗೂ ನಸೀಮಾ ಬಾನು ಅವರ ಪುತ್ರಿ
ಇವರು ಆಂಗ್ಲ ಭಾಷಾ ಸ್ನಾತಕೋತ್ತರ ಪದವೀಧರೆ ಆಗಿರುವ ವೃತ್ತಿಯಲ್ಲಿ ಸರಕಾರಿ ಪರ್ವಾಜೆ ಶಾಲಾ ಶಿಕ್ಷಕಿ ಆಗಿರುವುದಲ್ಲದೆ ರಾಜ್ಯ ಸಂಪನ್ಮೂಲ ವ್ಯಕ್ತಿ ಯಾಗಿರುವ ಅವರು ಆಂಗ್ಲ ಭಾಷಾ ಶಿಕ್ಷಕರಿಗೆ ನೀಡುವ ಹಲವಾರು ತರಬೇತಿಗಳನ್ನು ನೀಡಿರುತ್ತಾರೆ.
ಅಲ್ಲದೇ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಜಿಲ್ಲಾ ಹಂತದಲ್ಲಿ ಹಾಗೂ ತಾಲೂಕು ಹಂತದಲ್ಲಿ ಹಲವಾರು ತರಬೇತಿಗಳನ್ನು ನೀಡಿರುತ್ತಾರೆ. ಆಂಗ್ಲ ಭಾಷೆಯಲ್ಲಿ ವಿಶೇಷ ಪ್ರೀತಿಯನ್ನು ಹೊಂದಿರುವ ಇವರು ತನ್ನ ಶಾಲಾ ಮಕ್ಕಳಿಗೆ ಮಾತ್ರವಲ್ಲದೆ ಶಿಕ್ಷಕರಿಲ್ಲದ ಗ್ರಾಮೀಣ ಶಾಲೆಗಳ ವಿದ್ಯಾರ್ಥಿಗಳಿಗೆ English on Saturday ಕಾರ್ಯಕ್ರಮದ ಮೂಲಕ ಉಚಿತವಾಗಿ spoken English ತರಬೇತಿಗಳನ್ನು ನಡೆಸುತ್ತಿದ್ದಾರೆ.
ಕೃಷಿ ಪ್ರೇಮಿ ಪತಿ ಅಬೂಬಕ್ಕರ್ ಅವರ ಪ್ರೇರಣೆಯಿಂದ ಪ್ರಭಾವಿತರಾಗಿ ದೇಶದ ಬೇರೆ ಬೇರೆ ರಾಜ್ಯಗಳಿಂದ ಅಳಿವಿನಂಚಿನಲ್ಲಿರುವ ಭತ್ತದ ಬೀಜಗಳನ್ನು ಸಂಗ್ರಹಿಸುವ ವಿಶೇಷ ಕೆಲಸವನ್ನು ಮಾಡುತ್ತಿದ್ದಾರೆ. ಈ ವರ್ಷ 840ಕ್ಕೂ ಹೆಚ್ಚಿನ ಭತ್ತದ ಬೀಜಗಳನ್ನು ಸಂಗ್ರಹಿಸಿ ಬೆಳೆಸಿರುತ್ತಾರೆ. .ಎಂದು ತಿಳಿಸಲು ಹೆಮ್ಮೆ ಪಡುತ್ತೇವೆ. ಬೀಜಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿ ಅವುಗಳಲ್ಲಿರುವ ಆರೋಗ್ಯಕ್ಕಾಗಿ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಇವರು ಈಗಾಗಲೇ ‘ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ’ , ಕಾರ್ಕಳ ಸಾಹಿತ್ಯ ಸಮ್ಮೇಳನದಲ್ಲಿ ‘ಸಾಧನ ಶ್ರೀ ಪ್ರಶಸ್ತಿ’ ‘ಪರಿಶ್ರಮ ಕುಟುಂಬ ಪ್ರಶಸ್ತಿ’ ಬೆಳದಿಂಗಳ ಸಾಹಿತ್ಯ ಸಮ್ಮೇಳದಲ್ಲಿ ‘ಕರ್ನಾಟಕ ಯುವರತ್ನ’ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.