ಇತರೆ

ಮದುವೆ ದಿಬ್ಬಣಕ್ಕೆ ಹೊರಟ್ಟಿದ್ದ ಬಸ್ ಪಲ್ಟಿ: ಓರ್ವ ಸಾವು, 15ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

Views: 0

ಚಿತ್ರದುರ್ಗ: ಮದುವೆಗೆ ಹೊರಟಿದ್ದ ಖಾಸಗಿ ಬಸ್‌ ಲೈಟ್‌ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿರೋ ಭಯಾನಕ ಘಟನೆ ಹೊಳಲ್ಕೆರೆ ತಾಲ್ಲೂಕಿನ ಆವಿನಹಟ್ಟಿ ಗ್ರಾಮದ ಸಮೀಪ ನಡೆದಿದೆ.

ಖಾಸಗಿ ಬಸ್‌ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು ಸ್ಥಳದಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನ ಹೊಳಲ್ಕೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.

ಖಾಸಗಿ ಬಸ್‌ನಲ್ಲಿದ್ದ 35 ಮಂದಿ ಮದುವೆ ಮನೆಗೆ ಹೊರಟಿದ್ದರು. ಈ ವೇಳೆ ಭೀಕರ ಅಪಘಾತ ಸಂಭವಿಸಿದೆ. ಸುಮಾರು 15 ಮಂದಿ ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿದೆ.

ಬಸ್ ಅಪಘಾತದ ಸ್ಥಳಕ್ಕೆ ನಾಲ್ಕೈದು ಆಂಬ್ಯುಲೆನ್ಸ್‌ಗಳು ಆಗಮಿಸಿದ್ದು, ಹೊಳಲ್ಕೆರೆ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

Related Articles

Back to top button
error: Content is protected !!