ಇತರೆ

ಪರ ಪುರುಷನ ಜತೆ ಚಾಟಿಂಗ್​​ ಮಾಡಿ ಅನಾಹುತವನ್ನೇ ಸೃಷ್ಟಿಸಿದ್ದ ಮಹಿಳೆ ಕೇಸ್​ಗೆ ಟ್ವಿಸ್ಟ್​​!

Views: 152

ಪರ ಪುರುಷನ ಜತೆ ಚಾಟಿಂಗ್​​ ಮಾಡಿ ಅನಾಹುತವನ್ನೇ ಸೃಷ್ಟಿಸಿದ್ದ ಮಹಿಳೆ ಕೇಸ್​ಗೆ ಟ್ವಿಸ್ಟ್​​!

ಸುಂದರ ಸಂಸಾರ. ಈ ಮಧ್ಯೆ ಆ್ಯಪ್​ನಲ್ಲಿ ಪರಪುರುಷನ ಜೊತೆ ಚಾಟಿಂಗ್​ ಶುರುವಾಗಿತ್ತು. ಈ ವಿಚಾರ ಗಂಡನಿಗೂ ಗೊತ್ತಾಗಿತ್ತು. ಹೀಗೆ ರೆಡ್ ​ಹ್ಯಾಂಡಾಗಿ ಸಿಕ್ಕಾಕೊಂಡಿದ್ದ ಹೆಂಡ್ತಿ ಲವರ್ ಮಾತು ಕೇಳಿ ಪತಿ ಮೊಬೈಲ್​ನಿಂದಲೇ ಪೊಲೀಸರಿಗೆ RDX ಬಾಂಬ್ ಇರೋದಾಗಿ ಮೆಸೇಜ್ ಕಳಿಸಿದ್ದಳು. ಈ ಕೇಸ್​ಗೆ ಈಗ ಬಿಗ್​ ಟ್ವಿಸ್ಟ್​​ ಸಿಕ್ಕಿದೆ.

ಸೇಮ್​ ಟು ಸೇಮ್ ಇದೇ ಥರಾ.. ಕೈಗೆ ಸಿಕ್ಕ ಫೋನ್​ನಲ್ಲಿ ಸಿಕ್ಕ ಸಿಕ್ಕ ಆ್ಯಪ್​ಗಳನ್ನ ಇನ್​ಸ್ಟಾಲ್​ ಮಾಡ್ಕೊಂಡು.. ಆನ್​ಲೈನ್​ನಲ್ಲಿ ಸಿಕ್ಕ ಬಾಯ್​ಫ್ರೆಂಡ್​ ಹಿಂದೆ ಬಿದ್ದಿದ್ದ ಗೃಹಿಣಿ.. ಲವರ್​ ಮಾತು ಕೇಳಿ ಗಂಡನ ಫೋನ್​ನಿಂದ ಪೊಲೀಸರಿಗೆ RDX ಬಾಂಬ್ ಇರೋದಾಗಿ ಮೆಸೇಜ್ ಸೆಂಡ್​ ಮಾಡಿ, ಇವತ್ತು ಅತ್ತ ಗಂಡಾನೂ ಇಲ್ದೆ.. ಇತ್ತ ಬಾಯ್​ಫ್ರೆಂಡೂ ಇಲ್ದೆ ಪೊಲೀಸರ ಕೈಗೆ ತಗಲಾಕ್ಕೊಂಡಿದ್ದಾಳೆ..

ಉತ್ತರ ಕರ್ನಾಟಕ ಮೂಲದ ದಂಪತಿ ಆನೇಕಲ್​ನಲ್ಲಿ ವಾಸವಿದ್ರು, ಈ ಮಧ್ಯೆ ಸೋಷಿಯಲ್ ಮೀಡಿಯಾದ ಌಪ್​ನಲ್ಲಿ ರಾಮ್​ಪ್ರಸಾದ್ ಪರಿಚಯವಾಗ್ತಾನೆ. ರಾಮ್​ಪ್ರಸಾದ್ ಜೊತೆ ನಿರಂತರವಾಗಿ ಚಾಟ್ ಮಾಡ್ತಿದ್ದ ಮಹಿಳೆ, ಚಾಟಿಂಗ್​ನ ವಿಚಾರ ಪತಿಗೆ ಗೊತ್ತಾಗಿ ಮೊಬೈಲ್ ಒಡೆದು ಹಾಕಿದ್ದ. ಬೇರೆ ನಂಬರ್ ಮೂಲಕ ಇದನ್ನ ರಾಮ್​ಪ್ರಸಾದ್​ಗೆ ಮಹಿಳೆ ತಿಳಿಸಿದ್ಲು, ನಂತರ ಮಹಿಳೆಗೆ ಮೆಸೇಜ್ ಮಾಡಿದ್ದ ರಾಮ್​ಪ್ರಸಾದ್ ಸ್ನೇಹಿತ, ರಾಮ್​ಗೆ ಮೆಸೇಜ್ ಮಾಡದಿದ್ರೆ ನಿನ್ನ ಗಂಡನನ್ನ ಸಾಯಿಸುತ್ತೇನೆ, ಸ್ಟೇಷನ್​ಗೆ ಹೋಗಿ ನಿನ್ನ ಹೆಸರನ್ನ ಹೇಳಿ ಸರೆಂಡರ್ ಆಗುತ್ತೇನೆ ಅಂತ ಬೆದರಿಕೆ ಹಾಕಿದ್ದ. ಇದಕ್ಕೆ ಹೆದರಿ ಮಹಿಳೆ ಮತ್ತೆ ಚಾಟಿಂಗ್ ಶುರು ಮಾಡಿದ್ಲು, ಆಗ ಅಜಿತ್, ರಾಮ್​ಪ್ರಸಾದ್​ ಮಹಿಳೆಗೆ ಮತ್ತೊಂದು ಐಡಿಯಾ ಕೊಟ್ಟಿದ್ರು, ಅದರಂತೆ ಡಿಸಂಬರ್​ 5ರಂದು ಆರ್​ಡಿಎಕ್ಸ್ ಬಾಂಬ್ ಸ್ಫೋಟಿಸೋ ಮೇಸೆಜ್​ ಅನ್ನ ಗಂಡನ ನಂಬರ್​ನಿಂದ ತನಿಖಾ ಸಂಸ್ಥೆಗಳಿಗೆ ಕಳುಹಿಸಿ ಮೊಬೈಲ್​ನಿಂದ ಮೆಸೇಜ್​ನ ಡಿಲೀಟ್ ಮಾಡಿದ್ಲು.

ಹೀಅಥಗೆ ಸಂದೇಶ ಬಂದ ನಂಬರ್​ ಮೂಲ ಹುಡುಕಿ ಹೊರಟಿದ್ದ ತನಿಖಾ ಸಂಸ್ಥೆಗೆ ಮಹಿಳೆಯ ಗಂಡ ಸಿಕ್ಕಿಬಿದ್ದಿದ್ದ. ಬಳಿಕ ಪತಿಯನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ರು, ವಿಚಾರಣೆ ವೇಳೆ ಈ ಕೃತ್ಯ ಪತ್ನಿ ಎಸಗಿರೋದಾಗಿ ಗಂಡ ಶಂಕೆ ವ್ಯಕ್ತಪಡಿಸಿದ್ದ. ಬಳಿಕ ಪತ್ನಿಯನ್ನ ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ.

ಇನ್ನು, ಆನೇಕಲ್ ಠಾಣೆಯಲ್ಲಿ ಕೇಸ್​ ಸಂಬಂಧ ಎಫ್​ಐಆರ್ ದಾಖಲಾಗಿದ್ದು, ರಾಮ್​ಪ್ರಸಾದ್ ಹಾಗೂ ಅವನ ಸ್ನೇಹಿತನನ್ನು ಪೊಲೀಸ್ರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ ಎನ್ನಲಾಗಿದೆ.

Related Articles

Back to top button
error: Content is protected !!