ಇತರೆ

ಲಾರಿ -ಟಾಟಾ ಏಸ್ ನಡುವೆ ಡಿಕ್ಕಿ ಟಾಟಾ ವಾಹನದಲ್ಲಿ ಇದ್ದ ನಾಲ್ವರು ಸಾವು

Views: 0

ಸಿಂಧನೂರು, ಲಾರಿಗೆ ಟಾಟಾ ಏಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತ ಪಟ್ಟ ಘಟನೆ ತಾಲ್ಲೂಕಿನ ಪಗಡದಿನ್ನಿ ಕ್ಯಾಂಪ್ ಬಳಿ ನಡೆದಿದೆ.

ಬೆಳಗಿನ ಜಾವ ಲಾರಿ ಟಾಟಾ ಏಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಟಾಟಾ ವಾಹನದಲ್ಲಿ ಇದ್ದ ನಾಲ್ವರು ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ.

ಲಿಂಗಸುಗೂರುನಿಂದ ಸಿಂಧನೂರಿಗೆ ಸಂಚರಿಸುತ್ತಿದ್ದ ಲಾರಿಗೆ ಎದುರಿನಿಂದ ಬಂದ ಟಾಟಾ ಏಸ್ ಡಿಕ್ಕಿ ಹೊಡೆದ ಪರಿಣಾವ ನಾಲ್ವರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಸಿಂಧನೂರು ನಗರದ ಮೆಹಮೂದ್ ಕಾಲೋನಿಯ ಓರ್ವ ಹಾಗೂ ಲಿಂಗಸುಗೂರು ತಾಲ್ಲೂಕಿನ ಹಳ್ಳಿ ಮಟ್ಟೂರು ಗ್ರಾಮದ ಇಬ್ಬರು ಮತ್ತು ಬುಕ್ಕನಟ್ಟಿಯ ಓರ್ವ ಎಂದು ಗುರುತು ಹಿಡಿಯಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‌ಪಿ, ಬಿಎಸ್ ತಳವಾರ, ಪಿಐ ದುರ್ಗಪ್ಪ, ಸಿಪಿಐ ವೀರಾರೆಡ್ಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

Back to top button
error: Content is protected !!