ಇತರೆ

ಚಲಿಸುತ್ತಿದ್ದ ಟ್ರೈನ್​​ ಹತ್ತಲು ಹೋಗಿ ಕೆಳಗೆ ಬಿದ್ದ ಯುವಕ.. ಹೇಯ್​! ಹಿಡೀರಿ, ಆತನನ್ನು ಕಾಪಾಡಿ.. ಎನ್ನುತ್ತಲೇ.. ಮುಂದೇನಾಯಿತು..?

Views: 70

ಎಷ್ಟೋ ದಿನಗಳಿಂದ ಚಲಿಸುವ ರೈಲಿನಲ್ಲಿ ಹತ್ತೋದಾಗಲಿ, ಇಳಿಯೋದಾಗಲಿ ಮಾಡಬೇಡಿ ಎಂದು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಇಷ್ಟಾದ್ರೂ ಅವಘಡಗಳು ಮಾತ್ರ ನಿಲ್ಲುತ್ತಲೇ ಇಲ್ಲ. ಇಂಥದ್ದೇ ಒಂದು ಘಟನೆ ರಾಜಸ್ಥಾನದಲ್ಲೂ ನಡೆದಿದೆ.

ಹೌದು, ರಾಜಸ್ಥಾನದ ಜೋಧ್​ಪುರ ರೈಲು ನಿಲ್ದಾಣದಲ್ಲಿ ಯುವಕನೋರ್ವ ಟ್ರೈನ್​​ ಹತ್ತಲು ಹೋದಾಗ ಮುಂದಕ್ಕೆ ಹೋಗಿದೆ. ಆಗ ಚಲಿಸುತ್ತಿದ್ದ ಟ್ರೈನ್​ ಹತ್ತಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಕರ್ತವ್ಯನಿರತ ರೈಲ್ವೆ ಪೊಲೀಸ್ರು ಆತನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.

ಆತನನ್ನು ಗುವಾಹಟಿ ಮೂಲದ ಶಿವಪುತ್ರ ಶಿವರಾಯ್ ಎಂದು ಗುರುತಿಸಲಾಗಿದೆ. ಈತ ಜೋಧ್​ಪುರದಿಂದ ಗುವಾಹಟಿಗೆ ತೆರಳುತ್ತಿದ್ದ ಎನ್ನಲಾಗಿದ್ದು, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಇನ್ನು ರೈಲ್ವೆ ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Related Articles

Back to top button
error: Content is protected !!