ಇತರೆ

ಅನಿಲ ಸೋರಿಕೆ..ಏಕಾಏಕಿ ಸಿಲಿಂಡರ್​ ಸ್ಫೋಟ.. ಐವರ ಸ್ಥಿತಿ ಗಂಬೀರ

Views: 0

ಅನಿಲ ಸೋರಿಕೆ..ಏಕಾಏಕಿ ಸಿಲಿಂಡರ್​ ಸ್ಫೋಟ.. ಐವರ ಸ್ಥಿತಿ ಗಂಬೀರ

ಬೆಂಗಳೂರು: ಅಡುಗೆ ಅನಿಲ ಸೋರಿಕೆಯಾದ ಪರಿಣಾಮ ಏಕಾಏಕಿ ಸಿಲಿಂಡರ್​​​​ ಸ್ಫೋಟಗೊಂಡಿದೆ. ವೀವರ್ಸ್​​ ಕಾಲೋನಿ ಸಮೀಪದ ಮಾರುತಿ ಲೇಔಟ್​​ನಲ್ಲಿ ಸಿಲಿಂಡರ್​​ ಸ್ಫೋಟಗೊಂಡಿದ್ದು, ಕಾರಣ 5 ಮಂದಿಗೆ ಗಂಭೀರ ಗಾಯಗಳು ಆಗಿವೆ.

ಮಾರ್ಟಿನ್​​​ ಎಂಬುವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ. ಇಲ್ಲೇ ವಾಸವಿದ್ದ ಉತ್ತರ ಪ್ರದೇಶದ ಬನಾರಸ್​​ ಮೂಲದ ಜಮಾಲ್ (32), ನಾಜಿಯಾ (22), ಇರ್ಫಾನ್ (21), ಗುಲಾಬ್ (18), ಶಹಜಾದ್​​ (9) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, ಸಿಲಿಂಡರ್​ ಸ್ಫೋಟದ ತೀವ್ರತೆಗೆ ಮನೆ ಕಿಟಕಿ ಬಾಗಿಲು ಎಲ್ಲವೂ ಛಿದ್ರಗೊಂಡಿವೆ. ಹಾಗೆಯೇ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜುಗಳು ಕೂಡ ಪುಡಿ ಪುಡಿ ಆಗಿವೆ. ಸ್ಥಳಕ್ಕೆ ಅಗ್ನಿಶಾಮ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

 

Related Articles

Back to top button
error: Content is protected !!